ಬುಧವಾರ, ಡಿಸೆಂಬರ್ 11, 2019
19 °C

ಮೋದಿ ಹೊಗಳುವ ಭರದಲ್ಲಿ ಅಪಹಾಸ್ಯಕ್ಕೆ ಗುರಿಯಾದ ಸದ್ಗುರು ಜಗ್ಗಿ ವಾಸುದೇವ್‌

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಮೋದಿ ಹೊಗಳುವ ಭರದಲ್ಲಿ ಅಪಹಾಸ್ಯಕ್ಕೆ ಗುರಿಯಾದ ಸದ್ಗುರು ಜಗ್ಗಿ ವಾಸುದೇವ್‌

ನವದೆಹಲಿ: ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ  ಪ್ರಧಾನ ಮಂತ್ರಿ ನರೇಂದ್ರ  ಮೋದಿ ಅವರನ್ನು ಹೊಗಳುವ ಭರದಲ್ಲಿ ವಿಡಿಯೊವೊಂದನ್ನು ಟ್ವೀಟ್‌ ಮಾಡುವ ಮೂಲಕ ಸದ್ಗುರು ಜಗ್ಗಿ ವಾಸುದೇವ್‌ ಸಾಮಾಜಿಕ ಜಾಲತಾಣಗಳಲ್ಲಿ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ.

ಆನೆಯೊಂದು ಕಸವನ್ನು ಕಸದ ಬುಟ್ಟಿಗೆ ಹಾಕುವ ವಿಡಿಯೊ ಟ್ವೀಟ್‌ ಮಾಡಿರುವ ಈಶ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ್‌  ‘ಇದು ಸ್ವಚ್ಛ  ಭಾರತ ಅಭಿಯಾನದ ಫಲ’ ಎಂದು ಟ್ವೀಟ್‌ ಮಾಡುವ ಮೂಲಕ ನೆಟ್ಟಿಗರ ಅಪಹಾಸ್ಯಕ್ಕೆ ಒಳಗಾಗಿದ್ದಾರೆ.

 

ಸದ್ಗುರು ಜಗ್ಗಿ ವಾಸುದೇವ್‌ ಆನೆ ಕಸವನ್ನು ಎತ್ತಿ ಹಾಕುವ ವಿಡಿಯೊವನ್ನು ಪೋಸ್ಟ್‌ ಮಾಡಿದ್ದರು. ಇದು ಸ್ವಚ್ಛ  ಭಾರತ ಅಭಿಯಾನದ ಫಲವಾಗಿದ್ದು   ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು’ ಎಂದು ಟ್ವೀಟ್ ಮಾಡಿದ್ದರು.

ವಾಸ್ತವವಾಗಿ  ಕಸ ಎತ್ತಿಹಾಕುವ ಆನೆ ವಿಡಿಯೊ  ದಕ್ಷಿಣ ಆಫ್ರಿಕಾ ದೇಶದ ರಾಷ್ಟ್ರೀಯ ಉದ್ಯಾನವನವೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದು ಮೂರು ವರ್ಷಗಳ ಹಿಂದಿನ ಹಳೆಯ ವಿಡಿಯೊ. ಇದಕ್ಕೂ ದೇಶದ ‘ಸ್ವಚ್ಛ ಭಾರತ’ ಅಭಿಯಾನಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸಾವಿರಾರು ಜನ ರು ಟ್ವೀಟ್‌ ಮಾಡುವ ಮೂಲಕ ಜಗ್ಗಿ ವಾಸುದೇವ್‌ ಅವರನ್ನು ಅಪಹಾಸ್ಯ ಮಾಡಿದ್ದಾರೆ.

ಸದ್ಗುರು ಜಗ್ಗಿ ವಾಸುದೇವ್‌ ಪರವಾಗಿ ಕೆಲ ನೆಟ್ಟಿಗರು ಅಭಿಯಾನ ಆರಂಭಿಸಿದ್ದು ಆನೆಯ ಮಾದರಿಯನ್ನು ಅನುಸರಿಸುವಂತೆ ಅಪಹಾಸ್ಯ ಮಾಡಿದವರಿಗೆ ಟಾಂಗ್‌ ಕೊಟ್ಟಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸದ್ಗುರು ಜಗ್ಗಿ ವಾಸುದೇವ್‌ ಪರ ಮತ್ತು ವಿರೋಧದ ಚರ್ಚೆಗಳು ನಡೆಯುತ್ತಿವೆ.

‘ಇದು ದಕ್ಷಿಣಾ ಆಫ್ರಿಕಾದ ವಿಡಿಯೊ ಎಂಬುದು  ನನಗೂ ತಿಳಿದಿತ್ತು ಎಂದು ವಿಡಿಯೊ ಕುರಿತಂತೆ ಜಗ್ಗಿ ವಾಸುದೇವ್‌ ಟ್ವೀಟ್‌ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)