ಬುಧವಾರ, ಡಿಸೆಂಬರ್ 11, 2019
24 °C

ಪ್ರತಿಭಟನೆ ಹೀಗಿತ್ತು ನೋಡ್ರಿ...

Published:
Updated:
ಪ್ರತಿಭಟನೆ ಹೀಗಿತ್ತು ನೋಡ್ರಿ...

ಬಾವುಟ, ಬೋರ್ಡ್‌ ಹಿಡಿದು ಬೀದಿಯಲ್ಲಿ ಘೋಷಣೆ ಕೂಗುತ್ತಾ ಪ್ರತಿಭಟಿಸುವುದು ಹಳೇ ಪದ್ಧತಿ. ಆದರೆ ನಾವು ಹಾಗಲ್ಲ ಎನ್ನುತ್ತಲೇ ಏಕಾಏಕಿ ಬೀದಿ ಮೇಲೇ ಹೀಗೆ ಮಲಗಿದರು ಇವರು. ಪ್ರತಿಭಟನೆಯನ್ನು ಪರಿಣಾಮಕಾರಿಯಾಗಿಸಬೇಕು ಎಂದು ತಂಡ ಆಯ್ದುಕೊಂಡ ಪರಿಯಿದು. ಅಂದಹಾಗೆ ಇವರ ಬೇಡಿಕೆ ಇದ್ದದ್ದು ಬೇರೇನಕ್ಕೂ ಅಲ್ಲ, ಗೂಳಿ ಆಟ ನಿಲ್ಲಿಸಲು.

ಸ್ಪೇನ್‌ನಲ್ಲಿ ಗೂಳಿ ಆಟ ಪ್ರಸಿದ್ಧಿ. ಅಲ್ಲಿನ ಪಾಂಪ್ಲೊಮಾ ಎಂಬಲ್ಲಿ ಈ ‘ಸ್ಯಾನ್‌ ಫರ್ಮಿನ್ ಫೆಸ್ಟಿವಲ್’ ನೋಡಲೆಂದೇ ಸಾವಿರಾರು ಜನ ಸೇರುತ್ತಿದ್ದರು. 1591ರಿಂದಲೂ ಇದು ಸಂಪ್ರದಾಯದಂತೇ ನಡೆದುಬಂದಿದೆ.

ಆದರೆ ಗೂಳಿಗಳ ಮೇಲೆ ಇದು ಹಿಂಸಾತ್ಮಕ ಕೃತ್ಯ, ಅವು ದಿನವಿಡೀ ಬುಲ್‌ರಿಂಗ್‌ (ಗೂಳಿ ಆಟ ನಡೆಯುವ ಜಾಗ)ನಲ್ಲಿ ಹೆಣಗಾಡುವುದನ್ನು ನೋಡಿ ಅದನ್ನು ಪ್ರಾಣಿಹಿಂಸೆ ಎಂದು ಭಾವಿಸಿದ ಪ್ರಾಣಿಪ್ರಿಯರು ಒಟ್ಟಾಗಿ ಉತ್ಸವ ನಡೆಯುವ ಮೊದಲ ದಿನವೇ ಬುಲ್‌ರಿಂಗ್‌ ಮುಂದೆ ಹೀಗೆ ಅಣಿಯಾದರು.

ಪಾಂಪ್ಲೊಮಾ ಬುಲ್‌ರಿಂಗ್‌ನ ಪ್ರವೇಶದ್ವಾರದ ಬಳಿ ಮೈಗೆಲ್ಲಾ ಕೆಂಬಣ್ಣ ಬಳಿದುಕೊಂಡು ಗೂಳಿಯ ಕೊಂಬುಗಳನ್ನು ಹೋಲುವಂತೆ ಮಲಗಿ ಇವರು ಪ್ರತಿಭಟಿಸಿದರು. ಹೋರಾಟ ಯಶಸ್ವಿಯೂ ಆಯಿತು.

ಪ್ರತಿಕ್ರಿಯಿಸಿ (+)