ಶುಕ್ರವಾರ, ಡಿಸೆಂಬರ್ 13, 2019
17 °C

ಗ್ಯಾರೇಜಿನಲ್ಲಿ ಗುಜರಿ ಕಲೆ

ಎ.ಎಸ್. ಹೂಲಗೇರಿ Updated:

ಅಕ್ಷರ ಗಾತ್ರ : | |

ಗ್ಯಾರೇಜಿನಲ್ಲಿ ಗುಜರಿ ಕಲೆ

ಸೃಜನಶೀಲ ವ್ಯಕ್ತಿಯ ಕೈಗೆ ಏನೇ ಸಿಕ್ಕರೂ ಅದು ವ್ಯರ್ಥವಾಗುವುದಿಲ್ಲ. ಏಕೆಂದರೆ ಆತ ಕಸದಿಂದಲೂ ರಸ ತೆಗೆಯುವ ಚತುರ. ಬಾಗಲಕೋಟೆ ಜಿಲ್ಲೆಯ ಇಳಕಲ್ಲಿನ ಬಸವರಾಜ್ ಅಂತಹ ಒಬ್ಬ ಚತುರ ಕಲಾವಿದ.

ಬಿಡುವಿನ ವೇಳೆಯಲ್ಲಿ ದ್ವಿಚಕ್ರವಾಹನಗಳ ಬಿಡಿ ಭಾಗಗಳನ್ನು ಬಳಸಿ ಕಲಾಕೃತಿಗಳನ್ನು ರಚಿಸುತ್ತಾರೆ. ಗುಜರಿ ಅಂಗಡಿಗಳಲ್ಲಿ ಅಲೆದು ವಾಹನಗಳ ಬಿಡಿ ಭಾಗಗಳನ್ನು ಸಂಗ್ರಹಿಸುವುದು ಇವರ ಆಸಕ್ತಿಗಳಲ್ಲೊಂದು. ಹೀಗೆ ಖರೀದಿಸಿ ತಂದ ಬಿಡಿ ಭಾಗಗಳನ್ನು ಕಲಾತ್ಮಕ ವಿನ್ಯಾಸಕ್ಕೊಳಪಡಿಸಿ ವಿಶಿಷ್ಟ ಕಲಾಕೃತಿಗಳನ್ನಾಗಿಸುತ್ತಾರೆ.

ಈ ಗುಜರಿ ಕಲಾಕೃತಿಗಳನ್ನು ಪ್ರತ್ಯಕ್ಷ ನಿಂತು ನೋಡಿದರೆ ಕುತೂಹಲ ಗರಿಗೆದರುತ್ತದೆ. ಆಮೆ, ಸೈಕಲ್, ಟ್ರ್ಯಾಕ್ಟರ್, ರೈಲ್ವೆ ಎಂಜಿನ್, ಹಕ್ಕಿ, ಕೀಟ ಹೀಗೆ ವಿಭಿನ್ನ ಮಾದರಿಯ ಕಲಾಕೃತಿಗಳು ಇವರ ಗ್ಯಾರೇಜಿನಲ್ಲಿ ಅರಳಿ ನಿಂತಿವೆ. ಕಲಾಸಕ್ತರು ಒಳ್ಳೆಯ ಬೆಲೆಗೆ ಕಲಾಕೃತಿಗಳನ್ನು ಖರೀದಿಸುವುದೂ ಉಂಟು.

ಬಸವರಾಜ್‌ ಅವರು ಒಂದೇ ಬಗೆ ಕಲಾಕೃತಿಗಳನ್ನು ರೂಪಿಸುವುದಿಲ್ಲ. ಒಮ್ಮೆ ಮಾಡಿದ ಮಾದರಿಯನ್ನು ಮತ್ತೆ ಮಾಡುವುದಿಲ್ಲ. ಪ್ರವಾಸಿ ತಾಣಗಳು ಮತ್ತು ಪಾರ್ಕ್‌ಗಳಲ್ಲಿ ವಿಭಿನ್ನ, ವಿಶೇಷವೆನ್ನಿಸುವ ಗುಜರಿ ಕಲಾಕೃತಿಗಳನ್ನು ನಿರ್ಮಿಸಬೇಕು ಎನ್ನುವುದು ಅವರ ಮಹದಾಸೆ.

*

ಬಸವರಾಜ್ 

ಸಂಪರ್ಕಕ್ಕೆ: 99801 78013.

ಪ್ರತಿಕ್ರಿಯಿಸಿ (+)