ಶನಿವಾರ, ಡಿಸೆಂಬರ್ 7, 2019
24 °C

ಡ್ರೆಸಿಂಗ್‌ ರೂಮ್‌ ದೇವಾಲಯವಿದ್ದಂತೆ: ರವಿಶಾಸ್ತ್ರಿ

Published:
Updated:
ಡ್ರೆಸಿಂಗ್‌ ರೂಮ್‌ ದೇವಾಲಯವಿದ್ದಂತೆ: ರವಿಶಾಸ್ತ್ರಿ

ನವದೆಹಲಿ: ‘ಡ್ರೆಸಿಂಗ್ ರೂಮ್ ದೇವಾಲಯವಿದ್ದಂತೆ’ ಎಂದು ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ರವಿಶಾಸ್ತ್ರಿ ಹೇಳಿದ್ದಾರೆ.

‘ಕೋಚ್‌ ಆಗಿ ನೇಮಕಗೊಂಡ ಬಳಿಕ ನಾನಿನ್ನೂ ಡ್ರೆಸಿಂಗ್‌ ರೂಮ್‌ಗೆ ಹೋಗಿಲ್ಲ. ಆದರೆ, ಡ್ರೆಸಿಂಗ್‌ ರೂಮ್‌ ಬಗ್ಗೆ ತಂಡದ ಎಲ್ಲರಿಗೂ ಗೌರವವಿರಬೇಕು’ ಎಂದು ರವಿಶಾಸ್ತ್ರಿ ‘ಟೈಮ್ಸ್‌ ನೌ’ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘ತಂಡದ ಮುಂದೆ ಸಾಕಷ್ಟು ಸವಾಲುಗಳಿವೆ. ಆದರೆ, ತಂಡದ ಎಲ್ಲರೂ ಒಗ್ಗಟ್ಟಿನಿಂದ ಅವನ್ನು ಎದುರಿಸಬೇಕಿದೆ’ ಎಂದು ಅವರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)