ಭಾನುವಾರ, ಡಿಸೆಂಬರ್ 8, 2019
21 °C

ಪ್ರಧಾನಿ ಮೋದಿ ನೀತಿಗಳಿಂದಾಗಿ ಕಾಶ್ಮೀರದಲ್ಲಿ ಉಗ್ರರಿಗೆ ಜಾಗ: ರಾಹುಲ್‌ ಗಾಂಧಿ ಟೀಕೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಪ್ರಧಾನಿ ಮೋದಿ ನೀತಿಗಳಿಂದಾಗಿ ಕಾಶ್ಮೀರದಲ್ಲಿ ಉಗ್ರರಿಗೆ ಜಾಗ: ರಾಹುಲ್‌ ಗಾಂಧಿ ಟೀಕೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೀತಿಗಳೇ ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಜಾಗ ಒದಗಿಸಿಕೊಟ್ಟಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಅಮರನಾಥ ಯಾತ್ರಿಕರ ಮೇಲೆ ಭಯೋತ್ಪಾದಕ ದಾಳಿ ನಡೆದ ಹಿನ್ನೆಲೆಯಲ್ಲಿ ರಾಹುಲ್ ಅವರು ಪ್ರಧಾನಿ ಮೋದಿ ಅವರನ್ನು ಟೀಕಿಸಿ ಸರಣಿ ಟ್ವೀಟ್‌ ಮಾಡಿದ್ದಾರೆ. ಗುಪ್ತಚರ ದಳ ಎಚ್ಚರಿಕೆ ನೀಡಿದ್ದ ಹೊರತಾಗಿಯೂ ದಾಳಿ ತಡೆಯುವಲ್ಲಿ ಸರ್ಕಾರ ವಿಫಲವಾಗಿದ್ದೇಕೆ ಎಂದು ಪ್ರತಿಪಕ್ಷಗಳು ಈಗಾಗಲೇ ಸರ್ಕಾರವನ್ನು ಪ್ರಶ್ನಿಸಿವೆ.

‘ಪಿಡಿಪಿ ಜತೆಗಿನ ಮೈತ್ರಿ ಮೋದಿ ಅವರಿಗೆ ಅಲ್ಪಾವಧಿಯ ರಾಜಕೀಯ ಲಾಭ ಗಳಿಸಿಕೊಟ್ಟಿದ್ದರೆ ದೇಶಕ್ಕೆ ಸಾಮೂಹಿಕವಾಗಿ ನಷ್ಟ ಉಂಟುಮಾಡಿದೆ’ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

‘ಮೋದಿ ಅವರ ವೈಯಕ್ತಿಕ ಲಾಭದಿಂದಾಗಿ ಭಾರತಕ್ಕೆ ವ್ಯೂಹಾತ್ಮಕ ನಷ್ಟವಾಗಿದೆ. ಮುಗ್ಧ ಭಾರತೀಯರ ನೆತ್ತರು ತೆರಬೇಕಾಗಿದೆ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಆರೋಪಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಮತ್ತು ಪಿಡಿಪಿ ಮೈತ್ರಿ ಸರ್ಕಾರ ರಚಿಸಿದ್ದನ್ನೂ ರಾಹುಲ್ ಪ್ರಶ್ನಿಸಿದ್ದರು.

ಪ್ರತಿಕ್ರಿಯಿಸಿ (+)