ಶನಿವಾರ, ಡಿಸೆಂಬರ್ 7, 2019
16 °C

ಪೂನಮ್‌ ರಾವುತ್‌ ಶತಕ: ಆಸ್ಟ್ರೇಲಿಯಾಗೆ 227 ರನ್‌ ಟಾರ್ಗೆಟ್‌ ನೀಡಿದ ಭಾರತ

Published:
Updated:
ಪೂನಮ್‌ ರಾವುತ್‌ ಶತಕ: ಆಸ್ಟ್ರೇಲಿಯಾಗೆ 227 ರನ್‌ ಟಾರ್ಗೆಟ್‌ ನೀಡಿದ ಭಾರತ

ಬ್ರಿಸ್ಟಲ್: ಐಸಿಸಿ ಮಹಿಳಾ ವಿಶ್ವಕಪ್‌ ಕ್ರಿಕೆಟ್‌ನ 23ನೇ ಪಂದ್ಯದಲ್ಲಿ ಭಾರತ– ಆಸ್ಟ್ರೇಲಿಯಾ ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿವೆ.

ಭಾರತ ವಿರುದ್ಧ ಟಾಸ್‌ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತ್ತು. ಭಾರತ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 226 ರನ್‌ ಗಳಿಸಿದೆ.(ಪೂನಮ್‌ ರಾವುತ್‌ 106, ಮಿಥಾಲಿ ರಾಜ್‌ 69, ಸ್ಮೃತಿ ಮಂದಾನ 03, ಹರ್ಮನ್‌ಪ್ರೀತ್ ಕೌರ್ 23, ವೇದಕೃಷ್ಣಮೂರ್ತಿ 00, ಜೂಲನ್‌ ಗೋಸ್ವಾಮಿ 02,  ಸುಷ್ಮಾ ವರ್ಮಾ 06, ಶಿಖಾ ಪಾಂಡೆ 07, ದೀಪ್ತಿ ಶರ್ಮಾ 05)

ಸತತ ನಾಲ್ಕು ಪಂದ್ಯಗಳನ್ನು ಗೆದ್ದುಕೊಂಡ ಬಳಿಕ ಭಾರತ ತಂಡ ದಕ್ಷಿಣ ಆಫ್ರಿಕಾ ಎದುರು ಸೋಲು ಅನುಭವಿಸಿತು. ಆಸ್ಟ್ರೇಲಿಯಾ  ಕೂಡ ನಾಲ್ಕು ಪಂದ್ಯಗಳ ಜಯದ ಬಳಿಕ ಇಂಗ್ಲೆಂಡ್ ವಿರುದ್ಧ ಸೋಲು ಕಂಡಿದೆ. ಎರಡೂ ತಂಡಗಳಿಗೂ ಸೆಮಿಫೈನಲ್‌ ತಲುಪಲು ಇದು ಮಹತ್ವದ ಪಂದ್ಯ ಎನಿಸಿದೆ.

ಪ್ರತಿಕ್ರಿಯಿಸಿ (+)