ಭಾನುವಾರ, ಡಿಸೆಂಬರ್ 15, 2019
23 °C

ಫೇಸ್‌ಬುಕ್‌ನಲ್ಲಿ ನಕಲಿ ವಿಡಿಯೊ ಅಪ್‌ಲೋಡ್: ಬಿಜೆಪಿ ಮಾಹಿತಿ ತಂತ್ರಜ್ಞಾನ ವಿಭಾಗದ ಕಾರ್ಯದರ್ಶಿ ಸೆರೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಫೇಸ್‌ಬುಕ್‌ನಲ್ಲಿ ನಕಲಿ ವಿಡಿಯೊ ಅಪ್‌ಲೋಡ್: ಬಿಜೆಪಿ ಮಾಹಿತಿ ತಂತ್ರಜ್ಞಾನ ವಿಭಾಗದ ಕಾರ್ಯದರ್ಶಿ ಸೆರೆ

ಕೊಲ್ಕತ್ತ: ಕೋಮು ಪ್ರಚೋದನೆ ನೀಡುವ ನಕಲಿ ವಿಡಿಯೊವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ ಆರೋಪದಲ್ಲಿ ಪಶ್ಚಿಮ ಬಂಗಾಳದ ಬಿಜೆಪಿ ಮಾಹಿತಿ ತಂತ್ರಜ್ಞಾನ (ಐಟಿ) ವಿಭಾಗದ ಕಾರ್ಯದರ್ಶಿ ತರುಣ್‌ ಸೇನ್‌ಗುಪ್ತಾ ಅವರನ್ನು ಅಲ್ಲಿನ ಸಿಐಡಿ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.

ಬಂಧಿತರು ಅಸನ್ಸಲ್–ದುರ್ಗಾಪುರ ಕಮಿಷನರೇಟ್‌ನ ಹಿರಾಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ನಿವಾಸಿ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಕೋಮು ಪ್ರಚೋದನೆ ನೀಡುವಂಥ ವಿಡಿಯೊವನ್ನು ಕೆಲವು ವಾರಗಳ ಹಿಂದೆಯೇ ತರುಣ್‌ ಸೇನ್‌ಗುಪ್ತಾ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ‘ನಾರ್ತ್ 24 ಪರಗಣ’ ಜಿಲ್ಲೆಯ ಬಷಿರತ್‌ನ ಬದುರಿಯಾದಲ್ಲಿ ಇತ್ತೀಚೆಗೆ ಸಂಭವಿಸಿದ ಕೋಮು ಗಲಭೆ ವೇಳೆ ಅನೇಕರು ಆ ವಿಡಿಯೊವನ್ನು ಶೇರ್ ಮಾಡಿದ್ದರು. ಇದರಿಂದಾಗಿ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಪ್ರತಿಕ್ರಿಯಿಸಿ (+)