ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿರಾಯನ ನಡಿಗೆಗೆ ‘ಕಿರಿಕ್‌ ಪಾರ್ಟಿ’ಅಭಯ

Last Updated 12 ಜುಲೈ 2017, 19:30 IST
ಅಕ್ಷರ ಗಾತ್ರ

ಪರಮ್‌ವ ಸ್ಟುಡಿಯೊದ ರಕ್ಷಿತ್‌ ಶೆಟ್ಟಿ ಮತ್ತು ಪುಷ್ಕರ್‌ ಫಿಲಂನ ಪುಷ್ಕರ್‌ ಮಲ್ಲಿಕಾರ್ಜುನ್‌ ಕಾಂಬಿನೇಷನ್‌ನಲ್ಲಿ ಬಂದಿದ್ದ ‘ಕಿರಿಕ್‌ ಪಾರ್ಟಿ’ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದು ತಿಳಿದೇ ಇದೆ. ಕನ್ನಡದ ಹಲವು ಒಳ್ಳೆಯ ಸಿನಿಮಾಗಳನ್ನು ಜನರಿಗೆ ತಲುಪಿಸುವ ಮೂಲಕ ಈ ಯಶಸ್ಸನ್ನು ಸಾರ್ಥಕಪಡಿಸಿಕೊಳ್ಳಲು ಅವರು ಮುಂದಾಗಿದ್ದಾರೆ. ಇದರ ಭಾಗವಾಗಿಯೇ ಅವರು ಅರವಿಂದ್‌ ಕೌಶಿಕ್‌ ನಿರ್ದೇಶನದ ’ಹುಲಿರಾಯ’ ಸಿನಿಮಾದ ವಿತರಣೆಯ ಹೊಣೆಗಾರಿಕೆಯನ್ನು ಹೊತ್ತುಕೊಂಡಿದ್ದಾರೆ.

ಈಗಾಗಲೇ ರಕ್ಷಿತ್‌ ಮತ್ತು ಪುಷ್ಕರ್‌ ಇಬ್ಬರೂ ’ಹುಲಿರಾಯ’ಯನ್ನು ನೋಡಿ, ಮೆಚ್ಚಿಕೊಂಡಿದ್ದಾರೆ. ಏಕಕಾಲಕ್ಕೆ ಕರ್ನಾಟಕದ ಜತೆಗೆ ಬೇರೆ ದೇಶಗಳಲ್ಲಿಯೂ ಬಿಡುಗಡೆ ಮಾಡುವ ಯೋಜನೆ ಅವರದ್ದು. ಇದರಿಂದ ಹೊಸಬರ ಚಿತ್ರ ‘ಹುಲಿರಾಯ’ನ ಬಲ ಹೆಚ್ಚಾಗಿದೆ.

ಹಳ್ಳಿ ಹುಡುಗನೊಬ್ಬ ನಗರಕ್ಕೆ ಬಂದಾಗ ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲಾಗದೆ ಏನೇನು ಪಡಿಪಾಟಲು ಪಡುತ್ತಾನೆ. ಅದರ ಪರಿಣಾಮ ಏನಾಗುತ್ತದೆ ಎಂಬುದೇ ಈ ಚಿತ್ರದ ಒಂದು ಸಾಲಿನ ಕಥನ ಎಳೆ. ಈಗಾಗಲೇ ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯನ್ನೂ ಗಳಿಸಿಕೊಂಡಿವೆ.

ಈ ಸಿನಿಮಾದ ಭಿನ್ನ ಕಥಾ ಎಳೆಯೇ ರಕ್ಷಿತ್‌ ಮತ್ತು ಪುಷ್ಕರ್‌ ಅವರನ್ನು ಸೆಳೆದಿದೆ. ಅಲ್ಲದೆ ಇದು ಹೊಸಬರ ಚಿತ್ರ, ಅದಕ್ಕೆ ಪ್ರೋತ್ಸಾಹ ಕೊಡಬೇಕು ಎಂಬ ಕಳಕಳಿಯೂ ಇದೆ.

ಇದುವರೆಗೆ ಬೇರೆ ಬೇರೆ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದ ಬಾಲುನಾಗೇಂದ್ರ ಈ ಚಿತ್ರದ ನಾಯಕ. ನಾಯಕಿಯರಾಗಿ ದಿವ್ಯ ಉರಡಗ ಮತ್ತು ಚಿರಶ್ರೀ ಮೊದಲ ಬಾರಿಗೆ ಹಿರಿತೆರೆಗೆ ಪದಾರ್ಪಣೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT