ಶುಕ್ರವಾರ, ಡಿಸೆಂಬರ್ 6, 2019
21 °C

‘ನಾನು ಸುಶಾಂತ್‌ ಮಾಜಿ ಪ್ರೇಯಸಿ ಅಲ್ಲ’

Published:
Updated:
‘ನಾನು ಸುಶಾಂತ್‌ ಮಾಜಿ ಪ್ರೇಯಸಿ ಅಲ್ಲ’

'ನನ್ನನ್ನು ಯಾಕೆ ಸುಶಾಂತ್‌ ಸಿಂಗ್‌ ರಜಪೂತ್‌ನ ಮಾಜಿ ಪ್ರೇಯಸಿ ಎಂದು ಗುರುತಿಸುತ್ತೀರಿ?' ಎಂದು ನಟಿ ಅಂಕಿತಾ ಲೊಖಂಡೆ ಗರಂ ಆಗಿದ್ದಾರೆ.

ಕಂಗನಾ ರನೋಟ್‌ ನಿರ್ದೇಶನದ 'ಮಣಿಕರ್ಣಿಕಾ: ದಿ ಕ್ವೀನ್‌ ಆಫ್‌ ಝಾನ್ಸಿ'  ಚಿತ್ರದ ಮೂಲಕ ಅಂಕಿತಾ ಲೊಖಂಡೆ ಬಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಈ ಚಿತ್ರದಲ್ಲಿ ಪ್ರಮುಖ ಝಲ್ಕರಿ ಭಾಯ್‌ ಪಾತ್ರದಲ್ಲಿ ಅಂಕಿತಾ ಕಾಣಿಸಿಕೊಳ್ಳಲಿದ್ದು, ಚಿತ್ರದ ನಾಯಕಿಗೆ ಸರಿಸಮಾನವಾಗಿ ಇವರೂ ಯುದ್ಧದ ದೃಶ್ಯಗಳಲ್ಲಿ ಭಾಗವಹಿಸಲಿದ್ದಾರೆ.

ಕಳೆದ ವರ್ಷ ಅಂಕಿತಾ ಲೊಖಂಡೆ ತಮ್ಮ ಬಾಯ್‌ಫ್ರೆಂಡ್‌ ಆಗಿದ್ದ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಜೊತೆಗಿನ ಸಂಬಂಧದಿಂದ ದೂರವಾಗಿದ್ದರು. ಆದರೆ ಈಗಲೂ ತಮ್ಮನ್ನು ಸುಶಾಂತ್‌ ಸಿಂಗ್‌ನ ಮಾಜಿ ಪ್ರೇಯಸಿ ಎಂದು ಕರೆಯುವುದು ಅವರಿಗೆ ತುಂಬ ಮುಜುಗರ ತಂದಿದೆಯಂತೆ. ’ಯಾಕೆ ನನ್ನನ್ನು ಸುಶಾಂತ್‌ ಸಿಂಗ್‌ ಮಾಜಿ ಪ್ರೇಯಸಿ ಎಂದು ಕರೆಯುತ್ತಾರೋ ಗೊತ್ತಿಲ್ಲ, ನನಗೆ ನನ್ನದೇ ಆದ ಆಸ್ತಿತ್ವವಿದೆ. ನನ್ನ ಕೆಲಸದ ಬಗ್ಗೆ ಯಾಕೆ ಮಾತನಾಡಬಾರದು? ಶೀಘ್ರದಲ್ಲೇ ನನ್ನ ಮೊದಲ ಸಿನಿಮಾದ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದೇನೆ. ಎಲ್ಲರೂ ಅದರ ಬಗ್ಗೆ ಮಾತಾಡಿ’ ಎಂದು ಆಗ್ರಹಿಸಿದ್ದಾರೆ.

ಇತ್ತೀಚೆಗೆ ಅಂಕಿತಾ ಹೆಸರು ಅವರ ಆತ್ಮೀಯ ಗೆಳೆಯ ಕುನಾಲ್‌ ಟಂಡನ್‌ ಜೊತೆ ಕೇಳಿಬಂದಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಅವರು, ’ಕುಶಾಲ್‌ ನನ್ನ ಆತ್ಮೀಯ ಗೆಳೆಯ. ಈ ವರ್ಷ ಮೂರು ಜನರ ಜೊತೆ ನನ್ನ ಹೆಸರು ತಳುಕು ಹಾಕಿಕೊಂಡಿದೆ. ನನ್ನ ಸ್ನೇಹಿತರ ಜೊತೆ ನಾನು ಫೋಟೊಗಳನ್ನು ತೆಗೆದುಕೊಳ್ಳಬಾರದಾ? ಅವರನ್ನು ತಬ್ಬಿಕೊಳ್ಳುವುದು ನನಗೆ ಹೊಸ ವಿಚಾರವಲ್ಲ. ನಾನು ಇನ್ನಷ್ಟು ಜಾಗೃತರಾಗಬೇಕಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)