ಭಾನುವಾರ, ಡಿಸೆಂಬರ್ 8, 2019
21 °C

ಹೊಸ ಎತ್ತರಕ್ಕೆ ಷೇರುಪೇಟೆ

Published:
Updated:
ಹೊಸ ಎತ್ತರಕ್ಕೆ ಷೇರುಪೇಟೆ

ಮುಂಬೈ: ದೇಶದ ಷೇರುಪೇಟೆಗಳು ಬುಧವಾರ ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸುವ ಮೂಲಕ ಮತ್ತೊಂದು ಮೈಲುಗಲ್ಲು ತಲುಪಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 58 ಅಂಶ ಏರಿಕೆ ಕಂಡು, ಸಾರ್ವಕಾಲಿಕ ಗರಿಷ್ಠ ಮಟ್ಟವಾದ 31,805 ಅಂಶಗಳಿಗೆ ತಲುಪಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 30 ಅಂಶ ಹೆಚ್ಚಾಗಿ  ಹೊಸ ಗರಿಷ್ಠ ಮಟ್ಟವಾದ 9,816 ಅಂಶಗಳಿಗೆ ಏರಿಕೆಯಾಗಿದೆ. ಮಂಗಳವಾರ 9,786 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿತ್ತು.

ಗರಿಷ್ಠ ಮಟ್ಟದಲ್ಲಿಯೇ ವಹಿವಾಟು ಆರಂಭವಾಯಿತು. ಚಿಲ್ಲರೆ ಮತ್ತು ಕೈಗಾರಿಕಾ ಪ್ರಗತಿಯ ಅಂಕಿ–ಅಂಶ ವಹಿವಾಟಿನ ಬಳಿಕವಷ್ಟೇ ಪ್ರಕಟವಾಗುವುದರಿಂದ ಹೂಡಿಕೆದಾರರು ಹೆಚ್ಚಿನ ವಹಿವಾಟು ನಡೆಸಲಿಲ್ಲ. ಇದು ಸೂಚ್ಯಂಕದ ಏರುಮುಖ ಚಲನೆಗೆ ಕಡಿವಾಣ ಹಾಕಿತು ಎಂದು ತಜ್ಞರು ಹೇಳಿದ್ದಾರೆ.

ಬಿಎಸ್‌ಇನಲ್ಲಿ ವಲಯವಾರು  ತೈಲ ಮತ್ತು ಅನಿಲ ಶೇ 1.54 ರಷ್ಟು ಗರಿಷ್ಠ ಗಳಿಕೆ ಕಂಡುಕೊಂಡಿವೆ. ನಂತರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಬ್ಯಾಂಕಿಂಗ್‌ ಮತ್ತು ವಿದ್ಯುತ್‌ ವಲಯದಲ್ಲಿ ಉತ್ತಮ ವಹಿವಾಟು ನಡೆದಿದೆ.

ಪ್ರತಿಕ್ರಿಯಿಸಿ (+)