ಬುಧವಾರ, ಡಿಸೆಂಬರ್ 11, 2019
26 °C

ಗುಂಡಿ ತೋಡಿ ಮಲಗಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಂಡಿ ತೋಡಿ ಮಲಗಿ ಪ್ರತಿಭಟನೆ

ಮದ್ದೂರು: ಕೆಆರ್‌ಎಸ್‌ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ಕ್ರಮ ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಸದಸ್ಯರು ಮದ್ದೂರು ತಾಲ್ಲೂಕು ದೇಶಹಳ್ಳಿ ಮದ್ದೂರು ಕೆರೆಯಂಗಳದಲ್ಲಿ ಗುಂಡಿ ತೋಡಿ ಮಲಗುವ ಮೂಲಕ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ವೇದಿಕೆಯಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ 6ನೇ ದಿನಕ್ಕೆ ಕಾಲಿಟ್ಟಿದೆ. ಧರಣಿ ನಿರತ ಸ್ಥಳದ ಪಕ್ಕದಲ್ಲಿ ಜೆಸಿಬಿ ಯಂತ್ರದಿಂದ ಗುಂಡಿಗಳನ್ನು ತೆಗೆದ ಪ್ರತಿಭಟನಾಕರಾರು, ಗುಂಡಿಗಳಲ್ಲಿ ಶವದ ರೀತಿ ಮಲಗಿ ‘ನೀರು ಕೊಡಿ ಇಲ್ಲವೆ ಮಣ್ಣು ಹಾಕಿ’ ಎಂದು ಘೋಷಣೆ ಕೂಗಿದರು.

ಸ್ಥಳಕ್ಕೆ ಬಂದ ತಹಶೀಲ್ದಾರ್ ಎಸ್.ಹರ್ಷ, ಪ್ರತಿಭಟನೆ ನೇತೃತ್ವ ವಹಿಸಿರುವ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ರಮೇಶಗೌಡ ಜತೆ ಮಾತುಕತೆ ನಡೆಸಿದರು.

‘ಐದು ದಿನಗಳಿಂದ ನಡೆಯುತ್ತಿರುವ ನಿರಂತರ ಧರಣಿ ಬಗ್ಗೆ ಈಗಾಗಲೇ ಸರ್ಕಾರಕ್ಕೆ ವರದಿ ನೀಡಿದ್ದೇನೆ. ಕೆಆರ್‌ಎಸ್‌ ಜಲಾಶಯದಿಂದ ಜಿಲ್ಲೆಯ ಕೆರೆಕಟ್ಟೆಗಳಿಗೆ ನೀರು ತುಂಬಿಸುವಂತೆ ಕೋರಿದ್ದೇನೆ’ ಎಂದರು.

ಪ್ರತಿಕ್ರಿಯಿಸಿ (+)