ಶನಿವಾರ, ಡಿಸೆಂಬರ್ 7, 2019
25 °C

ಎಂಟರ ಘಟ್ಟಕ್ಕೆ ಭಾರತ

Published:
Updated:
ಎಂಟರ ಘಟ್ಟಕ್ಕೆ ಭಾರತ

ಜೊಹಾನ್ಸ್‌ಬರ್ಗ್‌ : ಭಾರತ ಮಹಿಳಾ ತಂಡ ಹಾಕಿ ವಿಶ್ವ ಲೀಗ್‌ ಸೆಮಿ ಫೈನಲ್‌ನ ಎಂಟರ ಘಟ್ಟ ಪ್ರವೇಶಿಸಿತು. ಬುಧವಾರ ನಡೆದ ‘ಬಿ’ ಗುಂಪಿನ ಮಹತ್ವದ ಪಂದ್ಯದಲ್ಲಿ ಪ್ರೀತಿ ದುಬೆ ಗಳಿಸಿದ ಏಕೈಕ ಗೋಲಿನ ಬಲದಿಂದ ಚಿಲಿ ವಿರುದ್ಧ ಭಾರತ  ಜಯ ಸಾಧಿಸಿತು.

ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿದ್ದ ಭಾರತ ನಂತರ ಬಲಿಷ್ಠ ಅಮೆರಿಕ ಎದುರು 1–4ರಿಂದ ಸೋಲು ಕಂಡಿತ್ತು. 

ಬುಧವಾರದ ಪಂದ್ಯದಲ್ಲಿ ಅತ್ಯು ತ್ತಮ ಆಟ ಆಡಿ ಗೆಲುವು ತನ್ನದಾಗಿ ಸಿಕೊಂಡಿತು. ಪೆನಾಲ್ಟಿ ಕಾರ್ನರ್ ಸೇರಿದಂತೆ ಕೆಲವು ಉತ್ತಮ ಅವಕಾಶ ಗಳನ್ನು ಭಾರತ ಕೈಚೆಲ್ಲಿತು. ಇಲ್ಲವಾದರೆ ತಂಡದ ಖಾತೆಯಲ್ಲಿ ಗೋಲುಗಳ ಸಂಖ್ಯೆ ಹೆಚ್ಚುತ್ತಿತ್ತು.

ಮೊದಲ ಕ್ವಾರ್ಟರ್‌ನಲ್ಲಿ ಉಭಯ ತಂಡಗಳಿಗೆ ಗೋಲು ಗಳಿಸುವ ಅವಕಾಶ ಲಭಿಸಿತ್ತು. ಆದರೆ ಇದನ್ನು ಸದು ಪಯೋಗ ಮಾಡಿಕೊಳ್ಳಲು ಆಗಲಿಲ್ಲ.

ನಾಲ್ಕನೇ ನಿಮಿಷದಲ್ಲಿ ಚಿಲಿಗೂ 12ನೇ ನಿಮಿಷದಲ್ಲಿ ಭಾರತಕ್ಕೂ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತ್ತು. ಭಾರತ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಗೋಲು ಗಳಿಸಿದಂತೆ ಭಾಸವಾಗಿತ್ತು. ಆದರೆ ವಿಡಿಯೊ ಪರಿಶೀಲಿಸಿದಾಗ ಚೆಂಡು ಆಟಗಾರ್ತಿಯರ ಮೈಗೆ ತಾಗಿ ಗೋಲು ಪೆಟ್ಟಿಗೆ ಸೇರಿದ್ದು ಖಾತರಿಯಾಯಿತು.

ಎರಡನೇ ಕ್ವಾರ್ಟರ್‌ನಲ್ಲಿ ಚಿಲಿ ಸಮರ್ಥ ರಣತಂತ್ರ ರೂಪಿಸಿತು. ಹೀಗಾಗಿ ಅನೇಕ ಬಾರಿ ಭಾರತದ ಪಾಳಯದಲ್ಲಿ ಆತಂಕ ಸೃಷ್ಟಿಸಲು ತಂಡಕ್ಕೆ ಸಾಧ್ಯ ವಾಯಿತು. ಆದರೆ ಬಲಿಷ್ಠ ರಕ್ಷಣಾ ಪಡೆ ಯನ್ನು ವಂಚಿಸಿ ಮುನ್ನುಗ್ಗಲು ಆ ತಂಡದ ಆಟಗಾರ್ತಿಯರಿಗೆ ಸಾಧ್ಯವಾಗ ಲಿಲ್ಲ. 19ನೇ ನಿಮಿಷದಲ್ಲಿ ಅನೂಪಾ ಬಾರ್ಲ ಅವರು ಭಾರತ ಪಾಳಯದಲ್ಲಿ ಸಂಚಲನ ಸೃಷ್ಟಿಸಿದರು. ಚಿಲಿ ಆಟ ಗಾರ್ತಿಯ ಬಳಿಯಿಂದ  ಕಸಿದುಕೊಂಡ ಚೆಂಡನ್ನು ಅವರು ಗೋಲು ಪೆಟ್ಟಿಗೆಯ ಬಳಿ ಇದ್ದ ರಾಣಿ ಬಳಿಗೆ ಕಳುಹಿಸಿದರು. ಆದರೆ ಚೆಂಡು ಗುರಿ ತಲುಪಿಸಲು ರಾಣಿಗೆ ಸಾಧ್ಯವಾಗಲಿಲ್ಲ.

ಮೊದಲ ಅರ್ಧದಲ್ಲಿ ಗೋಲು ಗಳಿಸದೆ ನಿರಾಸೆ ಅನುಭವಿಸಿದ ಎರಡೂ ತಂಡದವರು ದ್ವಿತೀಯಾರ್ಧದಲ್ಲಿ ಎಲ್ಲ ಸಾಮರ್ಥ್ಯ ಒಟ್ಟುಗೂಡಿಸಿ ಅಂಗಳಕ್ಕೆ ಇಳಿದರು. ಭಾರತಕ್ಕೆ ಫಲ ಸಿಕ್ಕಿತು. 38ನೇ ನಿಮಿಷದಲ್ಲಿ ರಾಣಿ ಮತ್ತು ಪ್ರೀತಿ ಎದುರಾಳಿ ತಂಡದ ರಕ್ಷಣಾ ವಿಭಾಗ ವನ್ನು ವಂಚಿಸಿ ಮುನ್ನುಗ್ಗಿದರು. ಪ್ರೀತಿ ಅವರು ಗೋಲು ಗಳಿಸಿ ತಂಡದಲ್ಲಿ ಹರ್ಷ ಉಕ್ಕಿಸಿದರು. ಮರುಕ್ಷಣದಲ್ಲೇ ಪ್ರೀತಿ ಮತ್ತೊಂದು ಅವಕಾಶ ಗಿಟ್ಟಿಸಿ ಕೊಂಡಿದ್ದರೂ ಚಿಲಿ ಗೋಲ್‌ ಕೀಪರ್‌ ಭಾರತದ ಆಟ ಗಾರ್ತಿಯ ಶ್ರಮವನ್ನು ವ್ಯರ್ಥಗೊಳಿಸಿದರು.

ಪ್ರತಿಕ್ರಿಯಿಸಿ (+)