ಸೋಮವಾರ, ಡಿಸೆಂಬರ್ 16, 2019
18 °C

ತಪ್ಪು ಮಾಡದಿದ್ದ ಮೇಲೆ ರಾಜೀನಾಮೆ ಏಕೆ?: ತೇಜಸ್ವಿ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಪ್ಪು ಮಾಡದಿದ್ದ ಮೇಲೆ ರಾಜೀನಾಮೆ ಏಕೆ?: ತೇಜಸ್ವಿ ಪ್ರಶ್ನೆ

ಪಟ್ನಾ: ‘ಉಪಮುಖ್ಯಮಂತ್ರಿಯಾಗಿ ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ರಾಜೀನಾಮೆಯ ಪ್ರಶ್ನೆಯೇ ಇಲ್ಲ’ ಎಂದು  ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಲಾಲು ಪ್ರಸಾದ್ ಅವರು ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ, ಹೋಟೆಲ್‌ಗಳಿಗೆ ಅಕ್ರಮವಾಗಿ ಜಮೀನು ಮಂಜೂರು ಮಾಡಿದ ಆರೋಪದ ಪ್ರಕರಣದಲ್ಲಿ ಸಿಬಿಐ ದಾಖಲಿಸಿರುವ ಎಫ್‌ಐಆರ್‌ನಲ್ಲಿ ತೇಜಸ್ವಿ ಅವರ ಹೆಸರೂ ಇದೆ. ಹೀಗಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ‘ತೇಜಸ್ವಿ ಆರೋಪಮುಕ್ತನಾಗಿ ಬರಲಿ’ ಎಂದು ಹೇಳಿದ್ದರು. ಈಗ ನಿತೀಶ್‌ ಹೇಳಿಕೆಗೆ ತೇಜಸ್ವಿ ತಿರುಗೇಟು ನೀಡಿದ್ದಾರೆ.

ಕಳೆದ ಶುಕ್ರವಾರ ಲಾಲು–ರಾಬ್ಡಿದೇವಿ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿದ ನಂತರ ಇದೇ ಮೊದಲ ಬಾರಿ ತೇಜಸ್ವಿ ಈ ಬಗ್ಗೆ ಮಾತನಾಡಿದ್ದಾರೆ.

ಪ್ರತಿಕ್ರಿಯಿಸಿ (+)