ಶನಿವಾರ, ಡಿಸೆಂಬರ್ 14, 2019
25 °C

ಆಸ್ಟ್ರೇಲಿಯಾ ತಂಡಕ್ಕೆ ಜಯ

ಪಿಟಿಐ Updated:

ಅಕ್ಷರ ಗಾತ್ರ : | |

ಆಸ್ಟ್ರೇಲಿಯಾ ತಂಡಕ್ಕೆ ಜಯ

ಬ್ರಿಸ್ಟಲ್ : ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವು  ಇಲ್ಲಿ ನಡೆಯುತ್ತಿರುವ ವನಿತೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ಭಾರತ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಇದರಿಂದಾಗಿ ಭಾರತ ತಂಡದ ಸೆಮಿಫೈನಲ್ ಹಾದಿ ಕಠಿಣವಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ಆರಂಭಿಕ ಆಟಗಾರ್ತಿ ಪೂನಮ್ ರಾವತ್ (106; 136ಎ, 11ಬೌಂ)  ಅವರ ಶತಕ ಮತ್ತು ವನಿತೆಯರ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ದಾಖಲೆ ಬರೆದ ಮಿಥಾಲಿ ರಾಜ್ (69 ರನ್) ಅವರ ಅರ್ಧಶತಕದ ಬಲದಿಂದ ತಂಡವು 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 226 ರನ್‌ ಗಳಿಸಿತು. ನಂತರ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ಮೆಗ್ ಲಾನಿಂಗ್ (ಔಟಾಗದೆ 76; 88ಎ, 7ಬೌಂ, 1ಸಿ) ಅವರ ಆಕರ್ಷಕ ಬ್ಯಾಟಿಂಗ್ ಬಲದಿಂದ 45.1 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 227 ರನ್‌ ಗಳಿಸಿ ಜಯಿಸಿತು.

ಭಾರತ ತಂಡವು ಈ ಸೋಲಿನ ನಂತರ ನಾಲ್ಕನೆ ಸ್ಥಾನಕ್ಕೆ ಕುಸಿದಿದೆ. ಒಟ್ಟು ಎಂಟು ಪಾಯಿಂಟ್‌ಗಳು ತಂಡದ ಖಾತೆಯಲ್ಲಿವೆ. ಲೀಗ್‌ನಲ್ಲಿ ಉಳಿದಿರುವ ಇನ್ನೊಂದು ಪಂದ್ಯದಲ್ಲಿ ಮಿಥಾಲಿ ರಾಜ್‌ ಬಳಗವು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.   ಮುಂದಿನ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ಬಳಗವನ್ನು ಎದುರಿಸಲಿದೆ.

ಸಂಕ್ಷಿಪ್ತ ಸ್ಕೋರು: ಭಾರತ: 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 226 (ಪೂನಮ್ ರಾವತ್ 106, ಸ್ಮೃತಿ ಮಂದಾನ 3, ಮಿಥಾಲಿ ರಾಜ್ 69, ಹರ್ಮನ್‌ಪ್ರೀತ್ ಕೌರ್ 23,  ಮೆಗಾನ್ ಷಟ್ 52ಕ್ಕೆ2, ಆ್ಯಷ್ಲೆ ಗಾರ್ಡನರ್ 48ಕ್ಕೆ1, ಎಲ್ಲಿಸ್ ಪೆರ್ರಿ 37ಕ್ಕೆ2,  ಕ್ರಿಸ್ಟನ್ ಬೀಮ್ಸ್ 43ಕ್ಕೆ1);  ಆಸ್ಟ್ರೇಲಿಯಾ:45.1 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 227 (ನಿಕೊಲ್ ಬೋಲ್ಟನ್ 36, ಬೆತ್ ಮೂನಿ 45, ಮೆಗ್ ಲಾನಿಂಗ್ ಔಟಾಗದೆ 76, ಎಲ್ಲಿಸ್ ಪೆರ್ರಿ  ಔಟಾಗದೆ 60, ಪೂನಮ್ ಯಾದವ್ 46ಕ್ಕೆ1) ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 8 ವಿಕೆಟ್‌ಗಳ ಜಯ. ಪಂದ್ಯದ ಆಟಗಾರ್ತಿ:  ಮೆಗ್ ಲಾನಿಂಗ್ (ಆಸ್ಟ್ರೇಲಿಯಾ)

ಪೂನಮ್ ರಾವುತ್ ಶತಕದ ಮಿಂಚು

106 -ರನ್

136 -ಎಸೆತ

11-ಬೌಂಡರಿ

77.94 - ಸ್ಟ್ರೈಕ್‌ರೇಟ್‌

ಪ್ರತಿಕ್ರಿಯಿಸಿ (+)