ಸೋಮವಾರ, ಡಿಸೆಂಬರ್ 16, 2019
18 °C

ಎರಡು ದಶಕಗಳ ನಂತರ ಭಾರತಕ್ಕೆ ಬರಲಿರುವ ಪೋಪ್ ಫ್ರಾನ್ಸಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎರಡು ದಶಕಗಳ ನಂತರ ಭಾರತಕ್ಕೆ ಬರಲಿರುವ ಪೋಪ್  ಫ್ರಾನ್ಸಿಸ್

ನವದೆಹಲಿ: ಬಹುತೇಕ ಎರಡು ದಶಕಗಳ ನಂತರ ಪೋಪ್ ಭೇಟಿಗೆ ಭಾರತ ಸಾಕ್ಷಿಯಾಗಲಿದೆ. ಪೋಪ್ ಫ್ರಾನ್ಸಿಸ್ ಅವರು ಮುಂದಿನ ವರ್ಷದ ಆರಂಭದಲ್ಲಿ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.

ವಿದೇಶ ಪ್ರವಾಸ ಮತ್ತು ವಿದೇಶಿ ನಾಯಕರನ್ನು ಬರಮಾಡಿಕೊಳ್ಳುವುದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷವಿಡೀ ನಿರತರಾಗಿರುವ ಕಾರಣ ಪೋಪ್ ಭೇಟಿ ದಿನಾಂಕ ನಿಗದಿಗೆ ಭಾರತ ಮತ್ತು ವ್ಯಾಟಿಕನ್ ಮಾತುಕತೆ ನಡೆಸುತ್ತಿವೆ.

‘ಈ ವರ್ಷದಲ್ಲಿ ಸಾಧ್ಯವಾಗದಿದ್ದರೆ ಮುಂದಿನ ವರ್ಷದ ಆರಂಭದಲ್ಲಿಯಾದರೂ ಭಾರತಕ್ಕೆ ಪೋಪ್ ಭೇಟಿ ನೀಡುವ ನಿರೀಕ್ಷೆಯಲ್ಲಿದ್ದೇವೆ’ ಎಂದು ಭಾರತದ ಕ್ಯಾಥೊಲಿಕ್ ಬಿಷಪ್ ಕಾನ್ಫರೆನ್ಸ್‌ನ ಪ್ರಧಾನ ಕಾರ್ಯದರ್ಶಿ ರೆವರೆಂಡ್ ಥಿಯೋಡರ್ ಮಸ್ಕರೇನ್ಹಸ್ ತಿಳಿಸಿದ್ದಾರೆ.

ಎರಡನೇ ಪೋಪ್ ಜಾನ್ ಪಾಲ್ ಅವರು 1999ರಲ್ಲಿ ಭಾರತಕ್ಕೆ ಬಂದಿದ್ದರು.

ಪ್ರತಿಕ್ರಿಯಿಸಿ (+)