ಶನಿವಾರ, ಡಿಸೆಂಬರ್ 7, 2019
25 °C

ಎರಡನೇ ಸುತ್ತು ಪ್ರವೇಶಿಸಿದ ಪರುಪಳ್ಳಿ ಕಶ್ಯಪ್‌, ಅಭಿಷೇಕ್‌

Published:
Updated:
ಎರಡನೇ ಸುತ್ತು ಪ್ರವೇಶಿಸಿದ ಪರುಪಳ್ಳಿ ಕಶ್ಯಪ್‌, ಅಭಿಷೇಕ್‌

ಕೆಲಗರಿ, ಕೆನಡಾ :  ಕನ್ನಡಿಗ ಅಭಿಷೇಕ್ ಎಲಿಗಾರ್‌ ಸೇರಿದಂತೆ ಭಾರ ತದ ಐದು ಮಂದಿ ಕೆನಡಾ ಗ್ರ್ಯಾನ್‌ಪ್ರಿ ಬ್ಯಾಡ್ಮಿಂಟನ್ ಟೂರ್ನಿಯ ಎರಡನೇ ಸುತ್ತು ಪ್ರವೇಶಿಸಿದ್ದಾರೆ.

ಬುಧವಾರ ನಡೆದ ಪಂದ್ಯಗಳಲ್ಲಿ ಅಭಿಷೇಕ್‌, ಪಿ.ಕಶ್ಯಪ್‌್ ಮತ್ತು ಎಚ್‌. ಎಸ್.ಪ್ರಣಯ್‌ ಎದುರಾಳಿಗಳ ವಿರುದ್ಧ ಏಕಪಕ್ಷೀಯ ಜಯ ಸಾಧಿಸಿದರು.

ಗಾಯದಿಂದ ಗುಣಮುಖರಾಗಿ ಮರಳಿದ ಕಶ್ಯಪ್‌ಗೆ ಇಲ್ಲಿ 16ನೇ ಶ್ರೇಯಾಂಕ ನೀಡಲಾಗಿತ್ತು. ಅವರು ಪೆರು ದೇಶದ ಡ್ಯಾನಿಯೆಲ್‌ ಲಾ ಟೊರೆ ಎದುರು 21–11, 21–9ರ ಜಯ ಸಾಧಿ ಸಿದರು. ಎರಡನೇ ಶ್ರೇಯಾಂಕದ ಪ್ರಣಯ್‌ಗೆ ಮೆಕ್ಸಿಕೊದ ಜಾಬ್‌ ಕ್ಯಾಸಿಲೊ ಅವರಿಂದ ಪ್ರತಿರೋಧ ಕಂಡುಬಂತು. ಆದರೆ 21–13, 21–15ರಿಂದ ಪ್ರಣಯ್‌ ಗೆದ್ದರು.

ಕಶ್ಯಪ್‌ ಮುಂದಿನ ಪಂದ್ಯದಲ್ಲಿ ಜಪಾನ್‌ನ ಕೋಕಿ ವಟನಬೆ ಅವರನ್ನು ಎದುರಿಸಲಿದ್ದು ಪ್ರಣಯ್‌ಗೆ ಎರಡನೇ ಸುತ್ತಿನಲ್ಲಿ ಸ್ಕಾಟ್ಲೆಂಡ್‌ನ ಕೀರನ್ ಮೆರಿಲೀಸ್‌ ಎದುರಾಳಿ. ಅಭಿಷೇಕ್ ಎಲಿಗಾರ್‌ ವಿಯೆಟ್ನಾಮ್‌ನ ಹಾಂಗ್‌ ನಾಮ್‌ ಗುಯೆನ್‌ ಅವರನ್ನು 21–15, 21–5ರಿಂದ ಸೋಲಿಸಿದರು. ಮುಂದಿನ ಪಂದ್ಯದಲ್ಲಿ ಅವರು ಅಮೆರಿಕದ ಹೋವಾರ್ಡ್ ಶೂ ವಿರುದ್ಧ ಸೆಣಸುವರು.ಭಾರತದ ಲಖಾನಿ ಸಾರಂಗ್‌ ಸ್ಥಳೀಯ ಯೂಜಿನ್‌ ಚಾನ್‌ ವಿರುದ್ಧ 21–9, 17–21, 21–7ರಿಂದ ಜಯ ಸಾಧಿಸಿದರೆ ಕರಣ್ ರಾಜನ್ ರಾಜರಾಜನ್‌ ಕ್ರೊಯೇಷಿಯಾದ ಜೋನಿಮಿರ್‌ ದುರ್ಕಿಂಜಕ್‌ ಅವರನ್ನು 13–21, 21–10, 21–13ರಿಂದ ಮಣಿಸಿದರು. ಲಖಾನಿ ಮುಂದಿನ ಪಂದ್ಯದಲ್ಲಿ ಕೊರಿಯಾದ ಲೀ ಹ್ಯೂನ್‌ ಅವರನ್ನೂ ಕರಣ್‌ ಇಂಗ್ಲೆಂಡ್‌ನ ಸಾಮ್‌ ಪಾರ್ಸನ್‌ ಅವರನ್ನೂ ಎದುರಿಸುವರು.

ಭಾರತದ ಹರ್ಷಿಲ್‌ ದಾನಿ ಮೊದಲ ಸುತ್ತಿನಲ್ಲೇ ಸೋಲು ಕಂಡರು. ಅವರನ್ನು ಫ್ರಾನ್ಸ್‌ನ ಲೂಕಾಸ್‌ ಕೊರ್ವಿ 21–11, 21–7ರಿಂದ ಸೋಲಿಸಿದರು.

ಪ್ರತಿಕ್ರಿಯಿಸಿ (+)