ಶನಿವಾರ, ಡಿಸೆಂಬರ್ 7, 2019
25 °C

ನೇಮಿನಾಥ ತೀರ್ಥಂಕರ, ದೇವಿಯ ವಿಗ್ರಹ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೇಮಿನಾಥ ತೀರ್ಥಂಕರ, ದೇವಿಯ ವಿಗ್ರಹ ಪತ್ತೆ

ನವಲಗುಂದ: ಹುಬ್ಬಳ್ಳಿ ತಾಲ್ಲೂಕಿನ ಹೆಬಸೂರ ಗ್ರಾಮದಲ್ಲಿ ದೇವಸ್ಥಾನವೊಂದರ ಜೀರ್ಣೋದ್ಧಾರಕ್ಕಾಗಿ ನೆಲ ಅಗೆಯುತ್ತಿದ್ದಾಗ ನೇಮಿನಾಥ ತೀರ್ಥಂಕರ ಹಾಗೂ ದೇವಿಯ ವಿಗ್ರಹ ಪತ್ತೆಯಾಗಿದೆ.

ಕಪ್ಪು ಶಿಲೆಯಲ್ಲಿರುವ ವಿಗ್ರಹವನ್ನು ಸಿಂಹ ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ.

ಪೀಠದ ಕೆಳಗೆ ‘ಶ್ರೀ ಮೂಲಸಂಘ ದೇವಗಣ ಶ್ರೀ ಸಂಖದೇವರ ಪ್ರತಿ ಬದ್ಧ’ ಎಂಬ ಎರಡು ಸಾಲಿನ ಶಾಸನ ಇದೆ. ಹೀಗಾಗಿ ಅದು ನೇಮಿನಾಥರದ್ದು ಇರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಿಗ್ರಹದ ಲಕ್ಷಣ, ಅದಕ್ಕೆ ಬಳಿಸಿದ ಕಲ್ಲು ಹಾಗೂ ಶಾಸನದ ಆಧಾರದ ಮೇಲೆ ಅದು 11 ನೇ ಶತಮಾನದ್ದು ಇರಬಹುದು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಚ್ಯವಸ್ತು ಸಂಗ್ರಹಾಲಯದ ಮೇಲ್ವಿಚಾರಕ ಡಾ.ಎಸ್.ಕೆ.ಮೇಲಕಾರ ಹಾಗೂ ಪ್ರಾಚೀನ ಭಾರತೀಯ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಸ್.ಜಿ.ಚಲವಾದಿ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)