ಗುರುವಾರ , ಡಿಸೆಂಬರ್ 12, 2019
17 °C

ಮಂಗಳೂರು ಪಾದಯಾತ್ರೆಗೆ ಜಿಲ್ಲಾಡಳಿತ ಅನುಮತಿ ನೀಡಿಲ್ಲ, ಎರಡು ದಿನ ಕಾದು ಮುಂದಿನ ತೀರ್ಮಾನ: ಎಚ್.ಡಿ.ದೇವೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು ಪಾದಯಾತ್ರೆಗೆ ಜಿಲ್ಲಾಡಳಿತ ಅನುಮತಿ ನೀಡಿಲ್ಲ,  ಎರಡು ದಿನ ಕಾದು ಮುಂದಿನ ತೀರ್ಮಾನ: ಎಚ್.ಡಿ.ದೇವೇಗೌಡ

ಹಾಸನ: ಮಂಗಳೂರು ಪಾದಯಾತ್ರೆಗೆ ಜಿಲ್ಲಾಡಳಿತ ಅನುಮತಿ ನೀಡಿಲ್ಲ,  ಎರಡು ದಿನ ಕಾದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಎಂದು ಜೆಡಿಎಸ್‌ ವರಿಷ್ಠ ಹಾಗೂ ಸಂಸದ ಎಚ್.ಡಿ.ದೇವೇಗೌಡ ಗುರುವಾರ ತಿಳಿಸಿದ್ದಾರೆ. 

ಕರಾವಳಿ ಕಲಹ ರಾಜಕೀಯವೋ,  ಆಡಳಿತದ ವೈಫಲ್ಯವೋ ಗೊತ್ತಿಲ್ಲ. ನಾಗರಿಕ ಸಮಾಜದಲ್ಲಿ ಗೌರವ ತರುವಂತಹದಲ್ಲ. ಎರಡು ರಾಷ್ಟ್ರೀಯ ಪಕ್ಷಗಳು ಉನ್ನತ ಮಟ್ಟದ ವ್ಯವಸ್ಥೆ ಹೊಂದಿವೆ. ಇದೊಂದು ಅಸಭ್ಯವಾದ ವರ್ತನೆಎಂದರು.

ಪಾದಯಾತ್ರೆ  ಪಕ್ಷತೀತಾವಾಗಿ  ನಡೆಯುವ ಕಾರ್ಯಕ್ರಮ. ರಾಜಕೀಯದ ಲಾಭಕ್ಕಾಗಿ ಶಾಂತಿ, ಸಭೆ ಮಾಡುವುದಿಲ್ಲ. ರಾಜಕೀಯ ಸಾಕಷ್ಟು ಹದಗೆಟ್ಟಿದೆ. ಅದನ್ನ ಬಹಿರಂಗವಾಗಿ ಹೇಳೋದಿಕ್ಕಾಗಲ್ಲ ಎಂದರು.

ಕರಾವಳಿ ಕಲಹದಿಂದ ಮನಸ್ಸಿಗೆ ಬೇಸರವಾಗಿದೆ. ರಮಾನಾಥರೈ ಕರೆದಿರುವ ಶಾಂತಿ ಸಭೆ ಎಷ್ಟು ಫಲಪ್ರಧವಾಗುತ್ತೋ ಗೊತ್ತಿಲ್ಲ. ಕಾದು ನೋಡಬೇಕು.  ಸರ್ಕಾರ ಕರಾವಳಿ ಕಲಹವನ್ನ ತಡೆಯಲು ಕಾನೂನನ್ನು ಬಿಗಿಗೊಳಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಎಲ್ಲರನ್ನ ಒಂದು ಕುಟುಂಬದ ರೀತಿಯಲ್ಲಿ ನೋಡಬೇಕು. ನಾನು ಕೂಡಾ ಜಿಲ್ಲಾ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಕುಡಿಯುವ ನೀರಿನ ಸಮಸ್ಯೆಯನ್ನ ಹೇಳಿದರೇ ಅದನ್ನೆ ತಪ್ಪು ಎನ್ನುತ್ತಾರೆ. ಕಾವೇರಿ ವಿಚಾರವಾಗಿ ಹೊಸ ಅನುಭವಿ ತಂಡವನ್ನ ರಚನೆಮಾಡಿದ್ದಾರೆ.  ಅವರ ಆಲೋಚನೆಯಲ್ಲಿ ಯಾವೇಲ್ಲಾ ತೀರ್ಮಾನಗಳನ್ನ ಕೈಗೊಳ್ಳುತ್ತಾರೆ ನೋಡೋಣ ಎಂದರು.

ರಾಷ್ಟ್ರಿಕೃತ ಬ್ಯಾಂಕ್ ಗಳಲ್ಲಿ ಸಾಲ ಮನ್ನಾ ಮಾಡಬೇಕೆಂದರೇ ಆರ್ಥಿಕ ಶಿಸ್ತು ನಾಶವಾಗಲಿದೆ. ನೋಟ್ ಬ್ಯಾನ್ ಆದಮೇಲೆ ಸಾಕಷ್ಟು ಕಾನೂನುಗಳು ಬದಲಾಗಿವೆ. ಹಾಗಾಗಿ ಸಾಲ ಮನ್ನಾ ಮಾಡುವುದನ್ನ ಯೋಚಿಸಿ ನಿರ್ಧಾರ ಕೈಗೊಳ್ಳಬೇಕಿದೆ.

ಪ್ರತಿಕ್ರಿಯಿಸಿ (+)