ಶುಕ್ರವಾರ, ಡಿಸೆಂಬರ್ 6, 2019
17 °C

ದಂಡುಪಾಳ್ಯ–2 ಚಲನಚಿತ್ರಕ್ಕೆ ದಂಡುಪಾಳ್ಯ ಗ್ಯಾಂಗ್‌ನಿಂದ ವಿರೋಧ ? 

Published:
Updated:
ದಂಡುಪಾಳ್ಯ–2 ಚಲನಚಿತ್ರಕ್ಕೆ ದಂಡುಪಾಳ್ಯ ಗ್ಯಾಂಗ್‌ನಿಂದ ವಿರೋಧ ? 

ಬೆಳಗಾವಿ: ಇಲ್ಲಿನ ಹಿಂಡಲಗಾದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ದಂಡುಪಾಳ್ಯ ಗ್ಯಾಂಗ್‌ನ 11 ಮಂದಿ ಸದಸ್ಯರು ಶುಕ್ರವಾರ ಬಿಡುಗಡೆಯಾಗಲಿರುವ ‘ದಂಡುಪಾಳ್ಯ–2’ ಚಲನಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಊಟ–ತಿಂಡಿ ತ್ಯಜಿಸಿ ಪ್ರತಿಭಟಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

‘ದಂಡುಪಾಳ್ಯ–2 ಚಲನಚಿತ್ರ ಬಿಡುಗಡೆ ಕುರಿತು ಮಾಧ್ಯಮದಲ್ಲಿ ನೋಡಿ ಅವರು ತಿಳಿದುಕೊಂಡಿದ್ದಾರೆ. ಆ ಚಲನಚಿತ್ರದಲ್ಲಿ ನಮ್ಮನ್ನು ಕೆಟ್ಟದಾಗಿ ವೈಭವೀಕರಿಸಿ ಬಿಂಬಿಸಲಾಗಿದೆ ಎಂದು ಗೊತ್ತಾಗಿದೆ.

ಅನವಶ್ಯಕವಾಗಿ ನಮ್ಮನ್ನು ನಿಂದಿಸಲಾಗುತ್ತಿದೆ. ಸಮಾಜದ ದೃಷ್ಟಿಯಲ್ಲಿ ನಮ್ಮನ್ನು ಕ್ರೂರಿಗಳಂತೆ ತೋರಿಸಲಾಗುತ್ತಿದೆ. ಇದು ಸರಿಯಲ್ಲ. ಚಲನಚಿತ್ರ ತೆರೆ ಕಂಡಲ್ಲಿ ಊಟ, ತಿಂಡಿ ತ್ಯಜಿಸುತ್ತೇವೆ’ ಎಂದು ದಂಡುಪಾಳ್ಯ ಗ್ಯಾಂಗ್‌ನವರು ಇದೇ 10ರಂದು ಮನವಿ ಕೊಟ್ಟಿದ್ದರು.

ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಚಿತ್ರ ತಂಡದ ವಕೀಲರೂ, ಮಾತುಕತೆ ನಡೆಸಿದ್ದಾರೆ. ಹೀಗಾಗಿ, ಯಾರೂ ಪ್ರತಿಭಟನೆ ನಡೆಸಿಲ್ಲ’ ಎಂದು ಕಾರಾಗೃಹ ಅಧೀಕ್ಷಕ ಟಿ.ಪಿ. ಶೇಷ ಸ್ಪಷ್ಟಪಡಿಸಿದರು.

ಪ್ರತಿಕ್ರಿಯಿಸಿ (+)