ಬುಧವಾರ, ಡಿಸೆಂಬರ್ 11, 2019
20 °C

ಕಾಶ್ಮೀರ ವಿಷಯದಲ್ಲಿ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಅಗತ್ಯವಿಲ್ಲ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಕಾಶ್ಮೀರ ವಿಷಯದಲ್ಲಿ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಅಗತ್ಯವಿಲ್ಲ

ನವದೆಹಲಿ: ಕಾಶ್ಮೀರ ವಿಷಯಕ್ಕೆ ಸಂಬಧಿಸಿ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಅಗತ್ಯವಿಲ್ಲ ಎಂದು ನೆರೆ ರಾಷ್ಟ್ರ ಚೀನಾಗೆ ಭಾರತ ಸ್ಪಷ್ಟಪಡಿಸಿದೆ.

‘ನಮ್ಮ ನಿಲುವು ಸ್ಪಷ್ಟವಾಗಿದೆ. ನಿರ್ದಿಷ್ಟ ದೇಶವೊಂದು ಗಡಿಯಾಚೆಗಿನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವುದು ಸಮಸ್ಯೆಯ ಕೇಂದ್ರ ಬಿಂದು ಎಂಬುದು ನಿಮಗೆ ತಿಳಿದಿದೆ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವುದರಿಂದ ದೇಶ, ಪ್ರಾದೇಶಿಕ ಮತ್ತು ವಿಶ್ವ ಮಟ್ಟದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಆತಂಕ ಎದುರಾಗಿದೆ’ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಗೋಪಾಲ್‌ ಬಗ್‌ಲೇ ಚೀನಾಗೆ ತಿಳಿಸಿದ್ದಾರೆ.

ಕಾಶ್ಮೀರ ವಿಚಾರದಲ್ಲಿ ರಚನಾತ್ಮಕ ಕಾರ್ಯ ನಿರ್ವಹಿಸಲು ಸಿದ್ಧವಿರುವುದಾಗಿ ಚೀನಾ ಬುಧವಾರ ಹೇಳಿತ್ತು. ಭಾರತ ಮತ್ತು ಪಾಕಿಸ್ತಾನದ ನಡುವಣ ಬಾಂಧವ್ಯ ವೃದ್ಧಿಗೆ ನೆರವು ನೀಡಲು ಒಲವು ಹೊಂದಿರುವುದಾಗಿಯೂ ಹೇಳಿತ್ತು.

ಪ್ರತಿಕ್ರಿಯಿಸಿ (+)