ಗುರುವಾರ , ಡಿಸೆಂಬರ್ 12, 2019
17 °C

ಮತ್ತೆ ಬರುತ್ತಿದೆ ‘ಟೈಗರ್’

Published:
Updated:
ಮತ್ತೆ ಬರುತ್ತಿದೆ ‘ಟೈಗರ್’

ಸಲ್ಮಾನ್‌ ಖಾನ್‌ರ ‘ಟೈಗರ್ ಜಿಂದಾ ಹೇ’ ಚಿತ್ರದ ಕತೆ ನಿಜ ಜೀವನದಿಂದ ಸ್ಫೂರ್ತಿ ಪಡೆದಿದೆಯಂತೆ. ನಟ ಸಲ್ಮಾನ್‌ ಖಾನ್ ಸ್ವತಃ ಈ ವಿಷಯ ಬಹಿರಂಗಪಡಿಸಿದ್ದಾರೆ.

‘ನಿಜ ಘಟನೆಯಿಂದ ಪ್ರೇರಣೆ ಪಡೆದು ಸಿನಿ ಕತೆ ರಚಿಸಲಾಗಿದೆ ಆದರೆ ಯಾವ ಘಟನೆ ಎಂದು ನಾನು ಹೇಳಿದರೆ ನಿರ್ದೇಶಕ ಆದಿತ್ಯ ಚೋಪ್ರಾ ನನ್ನನ್ನು ಕೊಲ್ಲುತ್ತಾರಷ್ಟೆ’ ಎಂದು ಹೇಳಿ ನಕ್ಕು ವಿಷಯ ತೇಲಿಸಿಬಿಟ್ಟರು.

ಆ್ಯಕ್ಷನ್ ದೃಶ್ಯಗಳು ಚಿತ್ರದ ಹೈಲೆಟ್ ಆಗಿರಲಿವೆ. ಈವರೆಗೆ ಬಾಲಿವುಡ್ ನೋಡಿರದ ರೀತಿಯ ಆ್ಯಕ್ಷನ್ ಈ ಚಿತ್ರದಲ್ಲಿರಲಿದೆ ಎಂದು ಮತ್ತೊಂದು ರಹಸ್ಯವನ್ನೂ ಬಿಟ್ಟುಕೊಟ್ಟರು.

ಭಿನ್ನ ಕಥಾ ಹಂದರವಿದ್ದ ‘ಟ್ಯೂಬ್‌ಲೈಟ್’ ಚಿತ್ರದ ಸೋಲಿನಿಂದ ಬೇಸರಗೊಂಡಿರುವ ಸಲ್ಮಾನ್‌ ಮತ್ತೆ ತಮ್ಮ ಹಳೆಯ ಲಯಕ್ಕೆ ಮರಳುವ ಪ್ರಯತ್ನದಲ್ಲಿದ್ದಾರೆ. ಹಾಗಾಗಿ ಈ ಚಿತ್ರವನ್ನು ಪಕ್ಕಾ ಮಾಸ್‌ ಚಿತ್ರವಾಗಿಸುವತ್ತ ಗಮನಹರಿಸಿದ್ದಾರೆ ಎನ್ನಲಾಗುತ್ತಿದೆ.

2012ರಲ್ಲಿ ಬಿಡುಗಡೆ ಆಗಿದ್ದ ‘ಏಕ್‌ ಥಾ ಟೈಗರ್’ ಚಿತ್ರದ ಮುಂದುವರೆದ ಭಾಗ ಇದಾಗಿದ್ದು, ಹಿಂದಿನ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಕತ್ರೀನಾ ಕೈಫ್ ಈ ಚಿತ್ರದಲ್ಲಿಯೂ ನಾಯಕಿಯಾಗಿ ನಟಿಸಿದ್ದಾರೆ. ಆ ಚಿತ್ರದಲ್ಲಿ ಭಾರತೀಯ ಗೂಢಚಾರಿ ಅಧಿಕಾರಿ (‘ರಾ’ ಏಜೆಂಟ್) ಆಗಿ ಸಲ್ಮಾನ್ ನಟಿಸಿದ್ದರು.

ಪ್ರತಿಕ್ರಿಯಿಸಿ (+)