ಶುಕ್ರವಾರ, ಡಿಸೆಂಬರ್ 13, 2019
17 °C

ಆಕೆ ಪವನ್‌ ಕಲ್ಯಾಣ್‌ ಜತೆ ನಟಿಸಲಾರೆ ಅಂದಿದ್ದೇಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಕೆ ಪವನ್‌ ಕಲ್ಯಾಣ್‌ ಜತೆ ನಟಿಸಲಾರೆ ಅಂದಿದ್ದೇಕೆ?

ಪವನ್ ಕಲ್ಯಾಣ್‌ ಅವರ ಸಿನಿಮಾದಲ್ಲಿ ನಟಿಸಲು ನಟ ನಟಿಯರು, ತಂತ್ರಜ್ಞರು ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ ನಟಿ ನಿವೇದಾ ಥಾಮಸ್ ಮಾತ್ರ ಇದಕ್ಕೆ ಅಪವಾದ. ಪವನ್ ಕಲ್ಯಾಣ್ ಜೊತೆ ತೆರೆ ಹಂಚಿಕೊಳ್ಳಲು ಸಿಕ್ಕ ಅವಕಾಶವನ್ನು ಅವರೇ ಪಕ್ಕಕ್ಕೆ ತಳ್ಳಿದ್ದಾರೆ. ಆದರೆ ಅದಕ್ಕೆ ಕಾರಣವೇನು ಗೊತ್ತೇ?

ನಿವೇದಾ ಅವರಿಗೆ ಪವನ್ ಅವರ ತಂಗಿಯ ಪಾತ್ರ ನಿರ್ವಹಿಸಲು ಅವಕಾಶ ಬಂದಿತ್ತಂತೆ. ಆದರೆ ಕಾಲೇಜು ದಿನಗಳಲ್ಲಿ ಪವನ್ ಅವರ ಪೋಸ್ಟರ್‌ಗಳನ್ನು ದಿಂಬಿನ ಕೆಳಗಿಟ್ಟು ಕನಸು ಕಾಣುತ್ತಿದ್ದ ಹುಡುಗಿಗೆ ತನ್ನನ್ನು ಪವನ್ ಅವರ ತಂಗಿಯಾಗಿ ಕಲ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲವಂತೆ. ಅದಕ್ಕೆ ‘ಆದರೆ ಪವನ್ ಕಲ್ಯಾಣ್‌ ಅವರ ನಾಯಕಿ ಆಗುತ್ತೇನೆಯೇ ವಿನಃ ತಂಗಿ ಆಗುವುದಿಲ್ಲ’ ಎಂದು ಹೇಳಿಬಿಟ್ಟಿದ್ದಾರೆ.

2011ರಲ್ಲಿ ಚಿತ್ರರಂಗ ಪ್ರವೇಶಿಸಿದ ನಿವೇದಾ ಹಲವು ಹಿಟ್ ಮಲೆಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳಿನಲ್ಲಿ 4 ಚಿತ್ರಗಳಲ್ಲಿ ನಟಿಸಿದ್ದಾರೆ.

ಪವನ್‌ ಅವರ ಯಾವ ಚಿತ್ರದಲ್ಲಿ ಪಾತ್ರ ನಿರ್ವಹಿಸಲು ಕೇಳಲಾಗಿತ್ತು ಎಂಬುದನ್ನು ಈ ಪ್ರತಿಭಾನ್ವಿತ ನಟಿ ಬಾಯಿ ಬಿಟ್ಟಿಲ್ಲ. ಪ್ರಸ್ತುತ ‘ನಿನ್ನು ಕೋರಿ’ ಚಿತ್ರದ ಗೆಲುವಿನ ಖುಷಿಯಲ್ಲಿರುವ ನಿವೇದಾ ಜೂನಿಯರ್ ಎನ್‌ಟಿಆರ್‌ ಅಭಿನಯದ ‘ಜೈ ಲವಕುಶ’ ಚಿತ್ರದ ಗೆಲವಿನ ಬಗ್ಗೆಯೂ ವಿಶ್ವಾಸವಿಟ್ಟುಕೊಂಡಿದ್ದಾರೆ.

ಅಂದಹಾಗೆ 1995ರಲ್ಲಿ ಜನಿಸಿರುವ ನಿವೇದಾ ಹಾಗೂ ಪವನ್ ನಡುವಿನ ವಯಸ್ಸಿನ ಅಂತರ 24 ವರ್ಷ.

ಪ್ರತಿಕ್ರಿಯಿಸಿ (+)