ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರೂಪದ ಅಂಚೆಚೀಟಿ ಪ್ರದರ್ಶನ ಇಂದಿನಿಂದ

Last Updated 13 ಜುಲೈ 2017, 19:30 IST
ಅಕ್ಷರ ಗಾತ್ರ

ಚೆಚೀಟಿ ಲೋಕವನ್ನು ಅನಾವರಣಗೊಳಿಸುವ ಹಾಗೂ ಅಂಚೆ ಚೀಟಿ ಸಂಗ್ರಹಕಾರರಿಗೆ ಪ್ರೋತ್ಸಾಹ ನೀಡುವ ‘ಕರ್‌ ಫಿಲೆಕ್ಸ್ 2017’ ಅಂಚೆ ಚೀಟಿ ಪ್ರದರ್ಶನ ಇದೇ 14 ರಿಂದ ಮೂರು ದಿನಗಳ ಕಾಲ ನಗರದಲ್ಲಿ ನಡೆಯಲಿದೆ.

ಕರ್ನಾಟಕ ಅಂಚೆಚೀಟಿ ಸಂಗ್ರಹಕಾರರ ಸಂಘ (ಕೆ.ಪಿ.ಎಸ್.) ಡಾ. ರಾಜ್‌ಕುಮಾರ್ ರಸ್ತೆಯ ಶ್ರೀ ರಾಜ ರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಈ ಪ್ರದರ್ಶನದಲ್ಲಿ ಕರ್ನಾಟಕವಲ್ಲದೆ ಗೋವಾ, ತೆಲಂಗಾಣ, ದೂರದ ಅಸ್ಸಾಂ ರಾಜ್ಯಗಳ 114ಕ್ಕೂ ಹೆಚ್ಚು ಸಂಗ್ರಹಕಾರರ ಅಂಚೆಚೀಟಿಗಳು ಪ್ರದರ್ಶನಗೊಳ್ಳಲಿವೆ.

ಹವ್ಯಾಸಿ ಪ್ರಪಂಚದಲ್ಲಿ ಅಂಚೆಚೀಟಿ ಸಂಗ್ರಹಕ್ಕೆ ಅಗ್ರಸ್ಥಾನ. ಎರಡು ಶತಮಾನಗಳ ಹಿಂದೆ ಪ್ರಕಟವಾದ ಅಂಚೆ ಚೀಟಿಯೊಂದಿಗೆ ಆರಂಭವಾದ ಈ ಹವ್ಯಾಸ ಇಂದು ಬಹು ಜನಪ್ರಿಯ. ಹವ್ಯಾಸವಾಗಿದ್ದ ‘ಫಿಲಾಟಲಿ’ ಅಂದರೆ ಅಂಚೆಚೀಟಿ ಸಂಗ್ರಹ ವಿಜ್ಞಾನ ಇನ್ನೊಂದು ಕವಲು.

‘ಏಷಿಯಾನ 1977’ ದೇಶದ ಮೊದಲ ಅಂತರ ರಾಷ್ಟ್ರೀಯ ಅಂಚೆ ಚೀಟಿ ಪ್ರದರ್ಶನವನ್ನು ಏರ್ಪಡಿಸಿದ್ದ ಬೆಂಗಳೂರು ಮುಂದಿನ ವರ್ಷ (1977 ರಿಂದೀಚೆಗೆ)ಗಳ ನಂತರ ಪ್ರತಿ ವರ್ಷ ಅಂಚೆಚೀಟಿ ಪ್ರದರ್ಶನ ಹಾಗೂ ಸ್ಪರ್ಧೆಗಳಿಗೆ ಜಾಗ ನೀಡಿತ್ತು. ಅಂಚೆ ಇಲಾಖೆ ವ್ಯವಸ್ಥೆ ಮಾಡುತ್ತಿದ್ದ ಇಂತಹ ವಾರ್ಷಿಕ ಪ್ರದರ್ಶನಗಳು ನಂತರ ಕರ್ನಾಟಕ ಫಿಲಾಟಲಿ ಸೊಸೈಟಿ ಮುಂದುವರೆಸುತ್ತಿತ್ತು.

ಶಾಲಾ ಮಕ್ಕಳಲ್ಲಿ ವಿದ್ಯಾರ್ಥಿ ಸಮೂಹದಲ್ಲಿ ಜ್ಞಾನಾರ್ಜನೆಗೆ ವಿಫುಲ ಅವಕಾಶಗಳನ್ನು ನೀಡುವ ಅಂಚೆಚೀಟಿ ಸಂಗ್ರಹ ಹವ್ಯಾಸವನ್ನು ಪ್ರೋತ್ಸಾಹಿಸಲು ಪಣ ತೊಟ್ಟ ಕೆ.ಪಿ.ಎಸ್. ಹತ್ತು ಹಲವು ಶಾಲಾ ಕಾಲೇಜುಗಳಲ್ಲಿ, ಸಮಾವೇಶಗಳಲ್ಲಿ ಅಂಚೆಚೀಟಿ ಸಂಗ್ರಹ ಹವ್ಯಾಸಕ್ಕೆ ಒತ್ತು ನೀಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ, ಆದರೆ ಹತ್ತು ವರ್ಷಗಳ ನಂತರ ‘ಕರ್‌ಫಿಲೆಕ್ಸ್–17’ ಪ್ರದರ್ಶನವನ್ನು ಇದೀಗ ಏರ್ಪಡಿಸಲು ಸಾಧ್ಯವಾಗಿದೆ ಎನ್ನುತ್ತಾರೆ ಕೆ.ಪಿ.ಎಸ್. ಪ್ರಧಾನ ಕಾರ್ಯದರ್ಶಿ ನಿಖಿಲೇಶ್ ಮೇಲ್ಕೋಟೆ .

ಒಂದು ದಶಕದ ಬಳಿಕ ನಡೆದಿರುವ ‘ಕರ್ ಫಿಲೆಕ್ಸ್’ ವಿಭಿನ್ನ ರೀತಿಯಿಂದ ಸಂಘಟಸಲು ಯುವ ಜನರನ್ನು, ವಿದ್ಯಾರ್ಥಿ ಸಮೂಹವನ್ನು ಸೆಳೆಯಲು ರಸ ಪ್ರಶ್ನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅತ್ಯಾಕರ್ಷಕ ಅಂಚೆ ಚೀಟಿಗಳೊಂದಿಗೆ ಸೆಲ್ಫಿ ತೆಗೆದು ಕೊಳ್ಳುವ ಅವಕಾಶ ಕಲ್ಪಿಸಲಾಗಿದ್ದು ಫಿಲಾಟಲಿಗೆ ಬಳಸುವ ಬುಕ್ ಮಾರ್ಕರ್, ಲಕೋಟೆಗಳನ್ನು ಸಿದ್ಧಪಡಿಸಲು ಮಾರ್ಗದರ್ಶನ ಕೊಡುವುದೂ ಪ್ರದರ್ಶನದ ಭಾಗದಲ್ಲಿದೆ.

ಅಂಚೆಚೀಟಿ ಪರಿಣಿತರೊಂದಿಗೆ ಸಂವಾದ, ಫಿಲಾಟದಲ್ಲಿ ವಿಚಾರ ಸಂಕಿರಣಗಳೊಂದಿಗೆ ‘ಟ್ರಜರ್ ಹಂಟ್’ ನಂತಹ ಆಕರ್ಷಕ ಕಾರ್ಯಕ್ರಮಗಳು ಇಲ್ಲಿವೆ ಎನ್ನುವ ಕೆ.ಪಿ.ಎಸ್. ಅಧ್ಯಕ್ಷ ಕೆ. ಚೈತನ್ಯ ದೇವ್ ಭಾರತೀಯ ಫಿಲಾಟಲಿ ಕಾಂಗ್ರೆಸ್ ಪ್ರತಿನಿಧಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆಂದರು.

ಎಲ್ಲಾ ವಯೋಮಾನದವರಿಗೆ ವಿಶೇಷವಾಗಿ ಶಾಲಾ ವಿದ್ಯಾರ್ಥಿಗಳಿಗೆ ಹೆಚ್ಚಿನ ಸ್ಪರ್ಧೆಗಳನ್ನು ಆಯೋಜಿಸಿದ್ದು ಇಲ್ಲಿ ಏರ್ಪಟ್ಟಿರುವ ‘ಲಕ್ಕಿ ಡಿಪ್’ನಲ್ಲಿ ವಿಜೇತರಾದವರಿಗೆ ಅಪರೂಪದ ಬಹುಮಾನವೊಂದು ಸಿಗಲಿದೆ, ಅದು ವಿಶ್ವದ ಮೊದಲ ಅಂಚೆ ಚೀಟಿ ‘ಫೆನ್ನಿ ಬ್ಲಾಕ್’ 1840ರಲ್ಲಿ ಇಂಗ್ಲೆಂಡ್‌ನಲ್ಲಿ ಪ್ರಕಟಗೊಂಡ ‘ಫೆನ್ನಿ ಬ್ಲಾಕ್’ ಇಂದು ಅತಿ ಬೆಲೆ ಬಾಳುವ ಅಂಚೆ ಚೀಟಿಗಳ ಪಟ್ಟಿಯಲ್ಲಿದೆ.

ರಾಷ್ಟ್ರದ ಹಲವು ಕಡೆಗಳಿಂದ ‘ಕರ್‌ಫೆಲೆಕ್ಸ್–17’ ಸ್ಪರ್ಧೆಗಳಿಗೆ ನೂರಕ್ಕೂ ಹೆಚ್ಚು ಮಂದಿ ವಿವಿಧ ವಯೋಮಾನದವರು ಪಾಲ್ಗೊಂಡಿದ್ದು ಇದರೊಂದಿಗೆ ಅನೇಕ ಆಹ್ವಾನಿತ ಪ್ರದರ್ಶಿಕೆಗಳು ಇರಲಿವೆ.

ಶತಕದತ್ತ ದಾಪುಗಾಲು ಹಾಕುತ್ತಿರುವ ಹೆಸರಾಂತ ವೈದ್ಯೆ ಡಾ. ಸೀತಾ ಬತೀಜಾ ಕರ್ನಾಟಕದ ಖ್ಯಾತ ಅಂಚೆ ಚೀಟಿ ಸಂಗ್ರಹಕಾರರಲ್ಲೊಬ್ಬರು. ಆರು ನೂರಕ್ಕೂ ಅಧಿಕ ಸದಸ್ಯರನ್ನು ಹೊಂದಿದ್ದು ಪ್ರತಿ ತಿಂಗಳೂ ಅಂಚೆಚೀಟಿ ಪ್ರಪಂಚದ ಆಗು ಹೋಗುಗಳನ್ನು ಚರ್ಚಿಸುವ ಕೆ.ಪಿ.ಎಸ್. ಸಭೆಗೆ ತಪ್ಪದೇ ಹಾಜರಾಗುವ ಡಾ. ಸೀತಾ ಬತೀಜಾ ಅವರ ‘ಬ್ರಿಟೀಷ್ ಇಂಡಿಯಾ’ ಅಂಚೆ ಸಂಗ್ರಹಕ್ಕೆ ಹತ್ತಾರು ರಾಷ್ಟ್ರೀಯ ಅಂತರ ರಾಷ್ಟ್ರೀಯ ಗೌರವ ಪುರಸ್ಕಾರಗಳು ಲಭಿಸಿವೆ. ಈ ಹಿರಿಯ ಜೀವವೇ ‘ಕರ್‌ಫಿಲೆಕ್ಸ್ 2017’ ಪ್ರದರ್ಶನದ ಆಕರ್ಷಣೆಯ ಬಿಂದು.

ಅಂಚೆಚೀಟಿ ಪ್ರವರ್ಧಮಾನಕ್ಕೆ ಬರುವ ಮುನ್ನವೇ ಅಚ್ಚುಕಟ್ಟಾದ ಅಂಚೆ ವ್ಯವಸ್ಥೆ ರೂಪಿಸಿದ್ದ ಪ್ರಾಂತ್ಯ ಮೈಸೂರು. ಇಂತಹ ಮೈಸೂರು ಅಂಚೆ ಏರ್ಪಾಡನ್ನು ಶೋಧಿಸಿದ ಕರ್ನಲ್ ಎಲ್.ಜಿ. ಶೈಣೈ ಅವರಿಂದ ಬಳುವಳಿ ಪಡೆದ ಎಂ.ಎಸ್. ರಾಮು ಅವರ ‘ಮೈಸೂರು ಅಂಚೆ’ ಪ್ರದರ್ಶನದ ಇನ್ನೊಂದು ಆಕರ್ಷಣೆ.

ಜಾಗತಿಕ ಕ್ರೀಡಾ ಹಬ್ಬ ‘ಒಲಿಂಪಿಕ್ಸ್’ ಅಂಚೆ ಚೀಟಿ ಸಂಗ್ರಹದ ಮೂಲಕ ಹಲವಾರು ಗೌರವ ಪುರಸ್ಕಾರ ಪಡೆದಿರುವ ಜಗನ್ನಾಥ ಮಣಿ ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಒಲಿಂಪಿಕ್ಸ್ ನಡೆದು ಬಂದ ಹಾದಿಯನ್ನು ವೈವಿಧ್ಯಮಯ ಅಂಚೆ ಚೀಟಿಗಳ ಮೂಲಕ ಅನಾವರಣಗೊಳಿಸಲಿದ್ದಾರೆ.

ಬ್ರಿಟಿಷ್ ವಸಾಹತುಗಳಲ್ಲಿ ಗ್ರೇಟ್ ಬ್ರಿಟನ್ ಅಂಚೆ ಚೀಟಿಗಳನ್ನು ಹೆಚ್ಚಾಗಿ ರೂಢಿಗೆ ತರಲಾಯಿತು. ಇಂತಹ ಅಂಚೆ ಚೀಟಿಗಳನ್ನು ‘ಪ್ರೆಂಚ್ – ಇಂಡಿಯಾ’ ಅಡಿಯಲ್ಲಿ ಪ್ರದರ್ಶಿಸಲಿದ್ದಾರೆ ಕೆ.ಪಿ.ಎಸ್. ಅಧ್ಯಕ್ಷ ಕೆ. ಚೈತನ್ಯ ದೇವ್.

ಕ್ರಿಕೆಟ್ ಕುರಿತು ವಿಶ್ವದಾದ್ಯಂತ ಹೊರ ಬಂದಿರುವ ಅಂಚೆ ಚೀಟಿಗಳು ಅಸಂಖ್ಯ. ಕ್ರಿಕೆಟ್ ಪಟು, ಸ್ಟೇಡಿಯಂ.. ಹೀಗೆ ಕ್ರಿಕೆಟ್ ಲೋಕವನ್ನು ಅನಾವರಣ ಮಾಡಲಿದ್ಸಾರೆ. ಕೈಲಾಸ್ ನಹರ್ ಹಾಗೂ ನಿಖಿಲೇಶ್ ಮೇಲ್ನೋಟೆ.

ಹತ್ತು ವರ್ಷಗಳ ನಂತರ ಏರ್ಪಡುತ್ತಿರುವ ‘ಕರ್‌ಫಿಲೆಕ್ಸ್’ ಅಂಚೆಚೀಟಿ ಜಗತ್ತಿನ ಹಲವು ಕೌತುಕಗಳ ಆಗರವಾಗಲಿದೆ. ಅಪರೂಪದ ಅಂಚೆಚೀಟಿಗಳ ಪ್ರದರ್ಶನ ವೇದಿಕೆಯಾಗಲಿದೆ ‘ಕರ್ ಫಿಲೆಕ್ಸ್’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT