ಶುಕ್ರವಾರ, ಡಿಸೆಂಬರ್ 6, 2019
19 °C

ನಿಮಗೂ ಶುಭ ತರಬಹುದೇ ಈ ಹಕ್ಕಿ, ಪ್ರಾಣಿಗಳು?

Published:
Updated:
ನಿಮಗೂ ಶುಭ ತರಬಹುದೇ ಈ ಹಕ್ಕಿ, ಪ್ರಾಣಿಗಳು?

ಚೀನಿಯರ ಫೆಂಗ್‌ ಶುಯಿ ವಾಸ್ತು ಶಾಸ್ತ್ರದಲ್ಲಿ ಹಕ್ಕಿ ಮತ್ತು ಪ್ರಾಣಿಗಳಿಗೆ ವಿಶೇಷ ಪ್ರಾಮುಖ್ಯ ನೀಡಲಾಗಿದೆ. ಅವುಗಳ ಪ್ರತಿಮೆಯನ್ನು ಇಟ್ಟುಕೊಳ್ಳುವುದರಿಂದ ಮನೆ, ಕಚೇರಿಯಲ್ಲಿ ನೆಮ್ಮದಿ, ಶಾಂತಿ ನೆಲೆಸುತ್ತದೆ ಎಂಬ ನಂಬಿಕೆ ಇದೆ.

*ಕುದುರೆಗಳು ಶಕ್ತಿ ಮತ್ತು ಗೆಲುವಿನ ಸಂಕೇತ. ಇವುಗಳಿಗೆ ವಾಸ್ತುವಿನಲ್ಲಿ ವಿಶೇಷ ಮಹತ್ವವಿದೆ. ಒಂಟಿ ಕುದುರೆಯನ್ನು ಕಚೇರಿಯಲ್ಲಿ ಇರಿಸುವುದರಿಂದ ಕೆಲಸದಲ್ಲಿ ಏಕಾಗ್ರತೆ ಹೆಚ್ಚುತ್ತದೆ. ದಣಿವನ್ನು ಮರೆಸುತ್ತದೆ. ಕೆಂಪು ಕುದುರೆಯನ್ನು ಇರಿಸುವುದರಿಂದ ವ್ಯವಹಾರದಲ್ಲಿ ಉತ್ತಮ ಫಲಿತಾಂಶ ಕಾಣಬಹುದು.

ಬಿಳಿ ಕುದುರೆಯನ್ನು ಮನೆ, ಕಚೇರಿಯ ಉತ್ತರ, ದಕ್ಷಿಣ ದಿಕ್ಕಿನಲ್ಲಿ ಇಡುವುದರಿಂದ ದುಷ್ಟಶಕ್ತಿಗಳು ಮನೆ ಪ್ರವೇಶಿಸದಂತೆ ತಡೆಯುತ್ತವೆ. ಕುದುರೆಯನ್ನು ಉಡುಗೊರೆ ಪಡೆಯುವುದರಿಂದ ಮನೆಯಲ್ಲಿ ಆದಾಯ, ಸಂತೋಷ ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಗೃಹ ಪ್ರವೇಶ ಅಥವಾ ಮಂಗಳಕಾರ್ಯದಲ್ಲಿ ಬಿಳಿ ಕುದುರೆಯನ್ನು ಉಡುಗೊರೆಯಾಗಿ ಕೊಡಬಹುದು.

*ಚರ್ಮದಿಂದ ಮಾಡಿದ ಕುದುರೆ ಮತ್ತು ತುಂಡಾದ ಕುದುರೆಯ ಪ್ರತಿಮೆಯನ್ನು ಮನೆಯಲ್ಲಿ ಇಡಬಾರದು.

*ಸಿಂಹದ ಪ್ರತಿಮೆಯನ್ನು ಮನೆಯಲ್ಲಿಟ್ಟುಕೊಳ್ಳುವುದು ವಾಸ್ತು ಪ್ರಕಾರ ಒಳ್ಳೆಯದು. ಪಿಂಗಾಣಿಯಿಂದ ಮಾಡಿದ ವಿಗ್ರಹವನ್ನು ಮನೆಯ ಮುಂದೆಯೂ ಇರಿಸಬಹುದು.

*ಡ್ರ್ಯಾಗನ್‌ ಪ್ರತಿಮೆಯನ್ನು ಮನೆ ಅಥವಾ ಕಚೇರಿಯ ಪೂರ್ವ ದಿಕ್ಕಿನಲ್ಲಿರಿಸಬೇಕು. ಇದು ಮನೆ ಮಂದಿಯ ಚೈತನ್ಯ ಹೆಚ್ಚಿಸುತ್ತದೆ. ಮರ, ಪಿಂಗಾಣಿ, ಹರಳಿನ ಡ್ರ್ಯಾಗನ್‌ ಇಡಬೇಕು.

* ಕೊಕ್ಕರೆ ಪ್ರತಿಮೆಯನ್ನು ಮನೆಯಲ್ಲಿ ಇರಿಸುವುದರಿಂದ ಶಾಂತಿ ನೆಲೆಸುತ್ತದೆ ಎಂಬ ನಂಬಿಕೆ ಇದೆ. ಒಂಟಿ ಕೊಕ್ಕರೆ ಸಂಬಂಧಗಳ ನಡುವಿನ ಬಂಧವನ್ನು ಗಟ್ಟಿಗೊಳಿಸುತ್ತದೆ. ಇದನ್ನು ಅಡುಗೆ ಕೋಣೆಯಲ್ಲಿ ಇರಿಸಬಾರದು.

*ಮ್ಯಾಂಡರಿನ್‌ ಜೋಡಿ ಹಕ್ಕಿ ಪ್ರೀತಿಯ ಸಂಕೇತ. ಇದನ್ನು ಮನೆಯ ನೈಋತ್ಯ ದಿಕ್ಕಿನಲ್ಲಿ ಇರಿಸುವುದರಿಂದ ದಂಪತಿಯ ನಡುವಿನ ಅನುಬಂಧ ಹೆಚ್ಚುತ್ತದೆಯಂತೆ.

ಪ್ರತಿಕ್ರಿಯಿಸಿ (+)