ಗುರುವಾರ , ಡಿಸೆಂಬರ್ 12, 2019
17 °C

ನೆಮ್ಮದಿಯ ‘ತವನಿಧಿ’

Published:
Updated:
ನೆಮ್ಮದಿಯ ‘ತವನಿಧಿ’

ಮನೆ ನಿರ್ಮಾಣವಾದ ಖುಷಿಯಲ್ಲಿದ್ದ ನಮಗೆ ಅದಕ್ಕೊಂದು ಚೆಂದದ ಹೆಸರಿಡುವುದು ಚಿಂತೆಯಾಗಿತ್ತು. ಒಳ್ಳೆಯ ಅರ್ಥವಿರುವ ಹೆಸರನ್ನೇ ಇಡಬೇಕು ಮತ್ತು ಅದು ಕೇಳಲು ಇಂಪಾಗಿರಬೇಕು ಎಂಬುದು ಮನೆ ಮಂದಿಯ ಬಯಕೆಯಾಗಿತ್ತು.

ಏನೆಂದು ಹೆಸರಿಡುವುದು ಎಂಬ ಚರ್ಚೆ ನಡೆಯುತ್ತಿದ್ದಾಗಲೇ ಪತ್ರಿಕೆಯೊಂದರಲ್ಲಿ ‘ತವನಿಧಿ’ ಎಂಬ ಪದದ ಅರ್ಥ ಕೊಟ್ಟಿದ್ದರು. ಎಂದೆಂದಿಗೂ ಕಡಿಮೆಯಾಗದ ಸಂಪತ್ತಿಗೆ ತವನಿಧಿ ಎನ್ನುತ್ತಾರೆ ಎನ್ನುವುದು ತಿಳಿದು, ತಕ್ಷಣವೇ ಇದೇ ಹೆಸರನ್ನು ಮನೆಗೆ ಇಡುವುದೆಂದು ನಿರ್ಧರಿಸಿದೆವು.

ಹೆಸರಿಗೆ ತಕ್ಕಂತೆ ನಮ್ಮನೆಯಲ್ಲಿ ಪ್ರೀತಿ, ನಂಬಿಕೆ, ಸಂಪತ್ತು ಎಲ್ಲವೂ ಸಮೃದ್ಧವಾಗಿದೆ.

–ಎಂ.ಇಂದಿರಾ, ಹೋಸಕೋಟೆ

ಪ್ರತಿಕ್ರಿಯಿಸಿ (+)