ಶುಕ್ರವಾರ, ಡಿಸೆಂಬರ್ 13, 2019
20 °C

ಹಂಡರಗಲ್ಲ ಗ್ರಾಮ: ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಂಡರಗಲ್ಲ ಗ್ರಾಮ: ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ

ವಿಜಯಪುರ:  ಹೊಲಕ್ಕೆ ಹೋಗಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿರುವ ಘಟನೆ ಮುದ್ದೇಬಿಹಾಳ ತಾಲ್ಲೂಕು ಹಂಡರಗಲ್ಲ ಗ್ರಾಮದಲ್ಲಿ ಬುಧವಾರ ಮುಸ್ಸಂಜೆ ನಡೆದಿದೆ.

ಹಂಡರಗಲ್ಲ ಗ್ರಾಮದ ದ್ಯಾಮವ್ವ ಚಂದ್ರಶೇಖರ ಗಡೇದ (25) ಎಂಬಾಕೆ ತಮ್ಮ ಹೊಲಕ್ಕೆ ಹೋಗಿದ್ದ ಸಂದರ್ಭ ಈ ದುಷ್ಕೃತ್ಯ ನಡೆದಿದೆ.

ಹೊಲದಲ್ಲಿದ್ದ ಗೃಹಿಣಿಯನ್ನು ಕಬ್ಬಿನ ಗದ್ದೆಯೊಳಗೆ ಎಳೆದೊಯ್ದು ಅತ್ಯಾಚಾರ ಎಸಗಿರುವ ದುಷ್ಕರ್ಮಿ, ತನ್ನ ದುಷ್ಕೃತ್ಯ ಬಯಲಿಗೆ ಬರುತ್ತದೆ ಎಂಬ ಅಂಜಿಕೆಯಿಂದ, ಆಕೆಯ ಕುತ್ತಿಗೆಗೆ ಟವೆಲ್‌ ಬಿಗಿದು ಕೊಲೆ ಎಸಗಿದ್ದಾನೆ ಎಂದು ಮುದ್ದೇಬಿಹಾಳ ಪೊಲೀಸರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)