ಭಾನುವಾರ, ಡಿಸೆಂಬರ್ 8, 2019
24 °C

ದೂರವಾಣಿಯಲ್ಲಿ ವಿಚ್ಛೇದನ

ಪಿಟಿಐ Updated:

ಅಕ್ಷರ ಗಾತ್ರ : | |

ದೂರವಾಣಿಯಲ್ಲಿ ವಿಚ್ಛೇದನ

ದೂರವಾಣಿಯಲ್ಲಿ ವಿಚ್ಛೇದನ

ಬಂದಾ (ಉತ್ತರಪ್ರದೇಶ)
: 2012ರ ನಾಗ್ಪುರ ಬಾಂಬ್‌ ಸ್ಫೋಟದಲ್ಲಿ ಭಾಗಿಯಾಗಿದ್ದ ಎನ್ನಲಾದ ವ್ಯಕ್ತಿಯೊಬ್ಬ, ದೂರವಾಣಿಯಲ್ಲಿ ಮೂರು ಬಾರಿ ತಲಾಖ್‌ ಹೇಳುವ ಮೂಲಕ ಪತ್ನಿಗೆ ವಿಚ್ಛೇದನ ನೀಡಿದ್ದಾನೆ.

‘ಶಂಶುದ್ದೀನ್‌ ಷಾ ಅವರನ್ನು 2011ರಲ್ಲಿ ಮದುವೆಯಾದೆ. ಇಸ್ಲಾಂ ಧರ್ಮವನ್ನು ಒಪ್ಪಿ, ಸ್ನೇಹಲತಾ ಎಂಬ ನನ್ನ ಹೆಸರನ್ನು ಶಂಶುನ್‌ ನಿಶಾ ಎಂದು ಬದಲಿಸಿಕೊಂಡೆ. ಪತಿಯ ಅಪರಾಧ ಚಟುವಟಿಕೆಯನ್ನು ನಾನು ವಿರೋಧಿಸಿದ ನಂತರ ನನ್ನ ಮೇಲೆ ದೌರ್ಜನ್ಯ ಆರಂಭಿಸಿದರು’ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.

**

ಸಿಬಿಐ ಬಲೆಗೆ

ನವದೆಹಲಿ:
ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ, ರಾಂಚಿಯ ಆದಾಯ ತೆರಿಗೆ ಇಲಾಖೆ ಪ್ರಧಾನ ಆಯುಕ್ತ ತಪಸ್‌ ಕುಮಾರ್‌ ದತ್ತಾ ಅವರನ್ನು ಸಿಬಿಐ ಬುಧವಾರ ತಡರಾತ್ರಿ ಬಂಧಿಸಿದೆ.

**

ತನಿಖಾ ದಳ

ಚೆನ್ನೈ:
ತಮಿಳುನಾಡಿನ ಸಮುದ್ರ ತೀರದಲ್ಲಿ ನಡೆಯುವ ಅಕ್ರಮ ಮರಳು ಗಣಿಗಾರಿಕೆ ತಡೆಗೆ, ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಸಂಚಾರಿ ತನಿಖಾ ದಳ ರಚಿಸಲಾಗಿದೆ.

**

ತಪಾಸಣೆಗೆ ಅಡ್ಡಿ

ನವದೆಹಲಿ:
ಬಿಹಾರದಲ್ಲಿ ಮದ್ಯ ನಿಷೇಧಿಸಿದ್ದರಿಂದ, ಕ್ಷಯರೋಗ ತಪಾಸಣೆಗೆ ಅಗತ್ಯವಾದ ಈಥೈಲ್‌ ಆಲ್ಕೊಹಾಲ್‌ ಲಭ್ಯವಿಲ್ಲದೇ ತೊಂದರೆಯಾಗಿದೆ. ಹೀಗಾಗಿ, ರೋಗ ವಿಶ್ಲೇಷಣೆಗೆ  ಅಗತ್ಯವಾದ ಮದ್ಯ ಹಾಗೂ ಸ್ಪಿರಿಟ್‌ ಬಳಕೆಗೆ ವಿಶೇಷ ವಿನಾಯಿತಿ ನೀಡುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯ ಆರೋಗ್ಯ ಇಲಾಖೆಗೆ ಪತ್ರ ಬರೆದಿದೆ.

**

ನಟಿ ವಿರುದ್ಧ ದೂರು

ಚೆನ್ನೈ:
ತಮಿಳು ವಾಹಿನಿಯಲ್ಲಿ ಪ್ರಸಾರವಾಗುವ ‘ಬಿಗ್‌ಬಾಸ್’ ರಿಯಾಲಿಟಿ ಷೋನಲ್ಲಿ ಕೊಳೆಗೇರಿ ನಿವಾಸಿಗಳ ಬಗೆಗೆ ನಿಂದನಾತ್ಮಕ ಭಾಷೆ ಬಳಸಿದ್ದಾರೆ ಎಂದು  ನಟಿ ಗಾಯತ್ರಿ ರಘುರಾಮ್ ವಿರುದ್ಧ ತಮಿಳು ಯುವ ಮತ್ತು ವಿದ್ಯಾರ್ಥಿ ಸಂಘಟನೆ ದೂರು ದಾಖಲಿಸಿದೆ.

ಈ ಕಾರ್ಯಕ್ರಮ ನಿರೂಪಿಸಿದ ನಟ ಕಮಲ್‌ ಹಾಸನ್ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬುಧವಾರ ‘ಹಿಂದೂ ಮಕ್ಕಳ್ ಕಚ್ಚಿ’ ಆಗ್ರಹಿಸಿತ್ತು.

**

ಶಾಸಕರ ದುರ್ವರ್ತನೆ

ಹೈದರಾಬಾದ್:
 ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಹಬೂಬಾಬಾದ್ ಮಹಿಳಾ ಜಿಲ್ಲಾಧಿಕಾರಿ ಜತೆ ಒರಟಾಗಿ ವರ್ತಿಸಿದ ಆರೋಪದ ಮೇಲೆ, ಆಡಳಿತಾರೂಢ ಟಿಆರ್ಎಸ್ ಶಾಸಕ ಬಿ.ಶಂಕರ್ ನಾಯಕ್ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

**

ಮರಳುಶಿಲ್ಪಿ ಅಸ್ವಸ್ಥ

ಭುವನೇಶ್ವರ
: ‍ಪುರಿ ನಗರಪಾಲಿಕೆ ವ್ಯಾಪ್ತಿಯ ಬಂಕಿಮುಹಾನ್‌ ಪಟ್ಟಣದಲ್ಲಿನ ಸಮುದ್ರತೀರದಲ್ಲಿ ಮಿತಿಮೀರಿರುವ ಮಾಲಿನ್ಯ ನಿಯಂತ್ರಣಕ್ಕೆ ಆಗ್ರಹಿಸಿ ಎರಡು ದಿನಗಳಿಂದ ಉಪವಾಸ ಸತ್ಯಾಗ್ರಹ ನಿರತರಾಗಿರುವ ಮರಳು ಶಿಲ್ಪಿ ಸುದರ್ಶನ್‌ ಪಟ್ನಾಯಕ್‌ ಗುರುವಾರ ಅಸ್ವಸ್ಥರಾದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರತಿಕ್ರಿಯಿಸಿ (+)