ಬುಧವಾರ, ಡಿಸೆಂಬರ್ 11, 2019
20 °C

ಕೆಪಿಸಿಸಿ ಪುನರ್‌ರಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಪಿಸಿಸಿ ಪುನರ್‌ರಚನೆ

ನವದೆಹಲಿ: ಕೆಪಿಸಿಸಿಯ ಪ್ರಮುಖ ಪದಾಧಿಕಾರಿಗಳ ಪಟ್ಟಿಯನ್ನು ಗುರುವಾರ ಪ್ರಕಟಿಸಿರುವ ಎಐಸಿಸಿಯು, ಚುನಾವಣೆಗೆ ಅಣಿಯಾಗುವ ನಿಟ್ಟಿನಲ್ಲಿ ಅನೇಕ ಹೊಸ ಮುಖಗಳಿಗೆ ಅವಕಾಶ ನೀಡಿದೆ.

ಚುನಾವಣೆಯ ವರ್ಷದಲ್ಲಿ ರಾಜ್ಯದ ಎಲ್ಲ ಭಾಗಗಳಿಗೆ ಪ್ರಾತಿನಿಧ್ಯ ನೀಡಿರುವ ಕಾಂಗ್ರೆಸ್‌ ಹೈಕಮಾಂಡ್‌, ಜಾತಿವಾರು ಲೆಕ್ಕಾಚಾರ ಗಮನದಲ್ಲಿ ಇರಿಸಿಕೊಂಡು ಪಟ್ಟಿ ಸಿದ್ಧಪಡಿಸಿದೆ. ಉಪಾಧ್ಯಕ್ಷರಲ್ಲಿ ಕೆಲವರನ್ನು ಮುಂದುವರಿಸಲಾಗಿದ್ದು, ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಯದರ್ಶಿ ಹುದ್ದೆಗೆ ಬಹುತೇಕ ಯುವಕರಿಗೆ ಆದ್ಯತೆ ನೀಡಲಾಗಿದೆ. ಉಪಾಧ್ಯಕ್ಷರು: ಡಾ.ಬಿ.ಎಲ್. ಶಂಕರ್, ಪ್ರೊ.ಬಿ.ಕೆ. ಚಂದ್ರಶೇಖರ್, ವೀರಣ್ಣ ಮತ್ತೀಕಟ್ಟಿ,  ಮೋಟಮ್ಮ, ಎನ್.ವೈ. ಹನುಮಂತಪ್ಪ, ಬಿ.ಶಿವರಾಮ್, ಎಚ್.ಟಿ. ಸಾಂಗ್ಲಿಯಾನ, ರಾಣಿ ಸತೀಶ್, ಎ.ಎಂ. ಹಿಂಡಸಗೇರಿ, ವೀರಕುಮಾರ ಪಾಟೀಲ್, ಡಿ.ಆರ್. ಪಾಟೀಲ್, ಎಲ್.ಹನುಮಂತಯ್ಯ, ಪ್ರೊ.ರಾಧಾಕೃಷ್ಣ, ಎನ್.ಎಸ್. ಬೋಸರಾಜ್, ಆರ್.ಕೃಷ್ಣಪ್ಪ, ಮಿಟ್ಟು ಚೆಂಗಪ್ಪ ಮತ್ತು ಕೆ.ಸಿ. ಕೊಂಡಯ್ಯ.

ಪ್ರತಿಕ್ರಿಯಿಸಿ (+)