ಭಾನುವಾರ, ಡಿಸೆಂಬರ್ 15, 2019
17 °C

‘ವಂದೇ ಮಾತರಂ ಮೊದಲು ಬರೆದಿದ್ದು ಬಂಗಾಳಿಯಲ್ಲಿ’

ಪಿಟಿಐ Updated:

ಅಕ್ಷರ ಗಾತ್ರ : | |

‘ವಂದೇ ಮಾತರಂ ಮೊದಲು ಬರೆದಿದ್ದು ಬಂಗಾಳಿಯಲ್ಲಿ’

ಚೆನ್ನೈ: ಸಂಸ್ಕೃತ ಮೂಲದಲ್ಲಿರುವ ‘ವಂದೇ ಮಾತರಂ’ ರಾಷ್ಟ್ರಗೀತೆಗೆ ಬಂಗಾಳಿ ಭಾಷೆಯಲ್ಲಿ ಮೊದಲು ಅಕ್ಷರ ರೂಪ ನೀಡಲಾಗಿದೆ ಎಂದು ತಮಿಳುನಾಡು ಅಡ್ವೊಕೇಟ್ ಜನರಲ್ ಆರ್. ಮುತ್ತುಕುಮಾರಸ್ವಾಮಿ ಅವರು ಗುರುವಾರ ಮದ್ರಾಸ್ ಹೈಕೋರ್ಟ್‌ಗೆ ಹೇಳಿದ್ದಾರೆ.

ಸರ್ಕಾರಿ ಶಾಲೆಗೆ ಪದವೀಧರ ಶಿಕ್ಷಕರ ನೇಮಕಾತಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ‘ವಂದೇ ಮಾತರಂ ಗೀತೆಯನ್ನು ಮೊದಲ ಬಾರಿ ಯಾವ ಭಾಷೆಯಲ್ಲಿ ಬರೆಯಲಾಗಿತ್ತು’ ಎಂಬ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಬಿ.ಎಡ್ ಪದವೀಧರ ಕೆ.ವೀರಮಣಿ ಎಂಬುವವರು ‘ಬಂಗಾಳಿ’ ಎಂದು ಉತ್ತರಿಸಿದ್ದರು.

ಆದರೆ ಮೌಲ್ಯಮಾಪಕರು ಈ ಉತ್ತರವನ್ನು ತಪ್ಪು ಎಂದು ಪರಿಗಣಿಸಿದ್ದಾರೆ. ಆದ್ದರಿಂದ ವೀರಮಣಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಪ್ರತಿಕ್ರಿಯಿಸಿ (+)