ಶನಿವಾರ, ಡಿಸೆಂಬರ್ 7, 2019
25 °C

ಜಹೀರ್‌ ಖಾನ್‌ ಕೇವಲ ಸಲಹೆಗಾರ: ಬಿಸಿಸಿಐ

Published:
Updated:
ಜಹೀರ್‌ ಖಾನ್‌ ಕೇವಲ ಸಲಹೆಗಾರ: ಬಿಸಿಸಿಐ

ನವದೆಹಲಿ: ಜಹೀರ್ ಖಾನ್‌ ಅವರನ್ನು ಭಾರತ ಕ್ರಿಕೆಟ್ ತಂಡದ ಬೌಲಿಂಗ್ ಸಲಹೆಗಾರನನ್ನಾಗಿ ನೇಮಕ ಮಾಡಲಾಗಿದ್ದು ವಿದೇಶದಲ್ಲಿ ನಡೆಯುವ ಪಂದ್ಯಗಳಿಗೆ ಮಾತ್ರ ಅವರ ಸೇವೆ ಸೀಮಿತ ಎಂದು ಬಿಸಿಸಿಐ ಗುರುವಾರ ಸ್ಪಷ್ಟಪಡಿಸಿದೆ.

ಮುಖ್ಯ ಕೋಚ್‌ ರವಿಶಾಸ್ತ್ರಿ ಅವರ ಸಲಹೆ ಪಡೆದುಕೊಂಡೇ ಈ ನೇಮಕಾತಿ ನಡೆದಿತ್ತು ಎಂದೂ ತಿಳಿಸಲಾಗಿದೆ. ಮೇ 11ರಂದು ರವಿಶಾಸ್ತ್ರಿ ಅವರ ನೇಮಕಾತಿಯನ್ನು ಪ್ರಕಟಿಸಿದ್ದ ಬಿಸಿಸಿಐ ಬೌಲಿಂಗ್ ಕೋಚ್ ಆಗಿ ಜಹೀರ್ ಖಾನ್ ಅವರನ್ನು ಮತ್ತು ವಿದೇಶದಲ್ಲಿ ನಡೆಯುವ ಪಂದ್ಯಗಳಿಗೆ ಬ್ಯಾಟಿಂಗ್ ಸಲಹೆಗಾರರನ್ನಾಗಿ ರಾಹುಲ್ ದ್ರಾವಿಡ್ ಅವರನ್ನು ನೇಮಕ ಮಾಡಿರುವುದಾಗಿ ತಿಳಿಸಿತ್ತು.

ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದ 10 ಮಂದಿಯ ಪೈಕಿ ಐವರನ್ನು ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್ ಮತ್ತು ವಿವಿಎಸ್ ಲಕ್ಷ್ಮಣ್‌ ಅವರನ್ನು ಒಳಗೊಂಡ ಕ್ರಿಕೆಟ್ ಸಲಹಾ ಸಮಿತಿ ಜುಲೈ ಒಂಬತ್ತರಂದು ಸಂದರ್ಶನ ನಡೆಸಿತ್ತು.

ಪ್ರತಿಕ್ರಿಯಿಸಿ (+)