ಗುರುವಾರ , ಡಿಸೆಂಬರ್ 12, 2019
17 °C

ಐ.ಟಿ ರಿಟರ್ನ್ಸ ವಿಳಂಬ ಸದ್ಯಕ್ಕೆ ದಂಡ ಇಲ್ಲ

Published:
Updated:
ಐ.ಟಿ ರಿಟರ್ನ್ಸ ವಿಳಂಬ ಸದ್ಯಕ್ಕೆ ದಂಡ  ಇಲ್ಲ

ನವದೆಹಲಿ: ಆದಾಯ ತೆರಿಗೆದಾರರು ಈ ತಿಂಗಳ 31ರ ಒಳಗೆ ಆದಾಯದ ಲೆಕ್ಕಪತ್ರ ವಿವರ (ಐ.ಟಿ ರಿಟರ್ನ್ಸ್‌) ಸಲ್ಲಿಸದಿದ್ದರೆ ದಂಡ ಪಾವತಿಸುವ ಅಗತ್ಯ ಇಲ್ಲ.

ರಿಟರ್ನ್ಸ್‌ ಸಲ್ಲಿಕೆಗೆ ವಿಳಂಬ ಮಾಡುವವರಿಗೆ ಗರಿಷ್ಠ ₹ 10 ಸಾವಿರದವರೆಗೆ ದಂಡ ವಿಧಿಸಲು ಅವಕಾಶ ಇದೆ. ಈ ವರ್ಷದ ಬಜೆಟ್‌ನಲ್ಲಿ ಈ ಪ್ರಸ್ತಾವ ಇದೆ. ಆದರೆ, ಇದು 2016–17ನೆ ಹಣಕಾಸು ವರ್ಷದ ರಿಟರ್ನ್ಸ್‌ ಸಲ್ಲಿಕೆಗೆ ಇದು ಅನ್ವಯವಾಗುವುದಿಲ್ಲ. 2018ರ ಏಪ್ರಿಲ್‌ನಿಂದ ಜಾರಿಗೆ ಬರಲಿದೆ.

ಅಂದಾಜು ವರ್ಷದ ರಿಟರ್ನ್ಸ್‌ ಅನ್ನು ಜುಲೈ 31ರ ಬದಲಿಗೆ ಡಿಸೆಂಬರ್‌  31ರ ಒಳಗೆ ರಿಟರ್ನ್ಸ್‌ ಸಲ್ಲಿಸಿದರೆ ₹ 5,000 ಮತ್ತು ಡಿಸೆಂಬರ್ 31ರ ನಂತರ ಸಲ್ಲಿಸಿದರೆ ₹10 ಸಾವಿರದಷ್ಟು ದಂಡ ನಿಗದಿಪಡಿಸಲಾಗಿದೆ. ₹ 5 ಲಕ್ಷದವರೆಗಿನ ಆದಾಯ ಹೊಂದಿರುವವರಿಗೆ ಈ ದಂಡದ ಮಿತಿಯನ್ನು ₹1 ಸಾವಿರಕ್ಕೆ ಮಿತಿಗೊಳಿಸಲಾಗಿದೆ. ರಿಟರ್ನ್ಸ್‌ ಸಲ್ಲಿಸುವಾಗ, ಚಾಲ್ತಿಯಲ್ಲಿ ಇರುವ ವರ್ಷವನ್ನು ಅಂದಾಜು ವರ್ಷ(2017–18) ಮತ್ತು ಪಡೆದ ಆದಾಯವನ್ನು ಪರಿಗಣಿಸುವ ಹಿಂದಿನ ವರ್ಷವನ್ನು (2016–17) ಹಣಕಾಸು ವರ್ಷ ಎಂದು ಪರಿಗಣಿಸಲಾಗುತ್ತಿದೆ.

ಪ್ರತಿಕ್ರಿಯಿಸಿ (+)