ಭಾನುವಾರ, ಡಿಸೆಂಬರ್ 8, 2019
21 °C

ಎಸ್‌ಬಿಐನಿಂದ ಇಂಟರ್‌ನೆಟ್‌ ಬ್ಯಾಂಕಿಂಗ್‌ ಸೇವಾ ಶುಲ್ಕ ಕಡಿತ

Published:
Updated:
ಎಸ್‌ಬಿಐನಿಂದ ಇಂಟರ್‌ನೆಟ್‌ ಬ್ಯಾಂಕಿಂಗ್‌ ಸೇವಾ ಶುಲ್ಕ ಕಡಿತ

ನವದೆಹಲಿ: ನಗದುರಹಿತ ವಹಿವಾಟು ಉತ್ತೇಜಿಸಲು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ಇಂಟರ್‌ನೆಟ್‌ ಮತ್ತು ಮೊಬೈಲ್‌ ಬ್ಯಾಂಕಿಂಗ್‌ ಸೇವೆಗಳ  ಶುಲ್ಕದಲ್ಲಿ ಗಮನಾರ್ಹ ಕಡಿತ ಮಾಡಿದೆ.

ಎನ್‌ಇಎಫ್‌ಟಿ ಮತ್ತು ಆರ್‌ಟಿಜಿಎಸ್‌ಗಳ ಮೇಲಿನ ಶುಲ್ಕವನ್ನು ಶೇ75ರಷ್ಟು ಕಡಿತ ಮಾಡಲಾಗಿದೆ. ‘ಐಎಂಪಿಎಸ್‌’ ಮೂಲಕ ₹1,000ವರೆಗೆ ವರ್ಗಾಯಿಸುವುದಕ್ಕೆ ಯಾವುದೇ ಶುಲ್ಕ ವಿಧಿಸಲಾಗುತ್ತಿಲ್ಲ.

ಇದೇ 15ರಿಂದ (ಶನಿವಾರ)  ಪರಿಷ್ಕೃತ ಶುಲ್ಕ ಜಾರಿಗೆ ಬರಲಿದೆ. ಇದರಿಂದ ಬ್ಯಾಂಕ್‌ನ 5.27 ಕೋಟಿ ಗ್ರಾಹಕರಿಗೆ ಪ್ರಯೋಜನ ಆಗಲಿದೆ. ಜತೆಗೆ ಈ ಎಲ್ಲ ಹೊಸ ಶುಲ್ಕಗಳಿಗೆ ಶೇ 18ರಷ್ಟು ಜಿಎಸ್‌ಟಿ ಅನ್ವಯವಾಗಲಿದೆ.

3.27 ಕೋಟಿ ಗ್ರಾಹಕರು ಇಂಟರ್‌ನೆಟ್‌ ಬ್ಯಾಂಕಿಂಗ್‌ ಸೌಲಭ್ಯವನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. 2ಕೋಟಿ ಗ್ರಾಹಕರು ಮೊಬೈಲ್‌ ಬ್ಯಾಂಕಿಂಗ್‌ ಸೇವೆಯನ್ನು ಬಳಸಿಕೊಳ್ಳುತ್ತಿದ್ದಾರೆ.

ಪ್ರತಿಕ್ರಿಯಿಸಿ (+)