ಶುಕ್ರವಾರ, ಡಿಸೆಂಬರ್ 13, 2019
17 °C

‘ವಿಶೇಷ ತಯಾರಿ ಮಾಡಿಕೊಂಡಿಲ್ಲ’: ವಿಜೇಂದರ್‌ ಸಿಂಗ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ವಿಶೇಷ ತಯಾರಿ ಮಾಡಿಕೊಂಡಿಲ್ಲ’: ವಿಜೇಂದರ್‌ ಸಿಂಗ್‌

ನವದೆಹಲಿ: ‘ಚೀನಾದ ಜುಲ್ಫಿಕರ್‌ ಮೈಮೈಟಿಯಾಲಿ ವಿರುದ್ಧ ಮುಂದಿನ ತಿಂಗಳು ನಡೆಯುವ ವೃತ್ತಿಪರ ಬಾಕ್ಸಿಂಗ್‌ ಪಂದ್ಯಕ್ಕಾಗಿ ಯಾವುದೇ ವಿಶೇಷ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ’ ಎಂದು ಭಾರತದ ಬಾಕ್ಸರ್‌ ವಿಜೇಂದರ್‌ ಸಿಂಗ್‌ ತಿಳಿಸಿದ್ದಾರೆ.

ಡಬ್ಲ್ಯುಬಿಎ ಏಷ್ಯಾ ಪೆಸಿಫಿಕ್‌ ಸೂಪರ್‌ ಮಿಡಲ್‌ವೇಟ್‌ ಚಾಂಪಿಯನ್‌ ಆಗಿರುವ ವಿಜೇಂದರ್‌ ಅವರು ಆಗಸ್ಟ್‌ 5 ರಂದು ಮುಂಬೈನಲ್ಲಿ ನಡೆಯುವ ಪಂದ್ಯದಲ್ಲಿ ಡಬ್ಲ್ಯುಬಿಒ ಓರಿಯೆಂಟಲ್‌ ಸೂಪರ್‌ ಮಿಡಲ್‌ವೇಟ್‌ ಪ್ರಶಸ್ತಿ ಜಯಿಸಿರುವ ಮೈಮೈಟಿಯಾಲಿ ವಿರುದ್ಧ ಸೆಣಸಲಿದ್ದಾರೆ.

ಹೋದ ವರ್ಷದ ಡಿಸೆಂಬರ್‌ನಲ್ಲಿ ಫ್ರಾನ್ಸಿಸ್‌ ಚೆಕಾ ವಿರುದ್ಧ ಗೆದ್ದಿದ್ದ ವಿಜೇಂದರ್‌ ಆ ನಂತರ ಯಾವ ಪಂದ್ಯದಲ್ಲೂ ಆಡಿರಲಿಲ್ಲ. ಹೀಗಾಗಿ ಮೈಮೈಟಿ ಯಾಲಿ ವಿರುದ್ಧದ ಪೈಪೋಟಿ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

‘ಈ ವರ್ಷದ ಏಪ್ರಿಲ್‌ನಲ್ಲಿ ಪಂದ್ಯ ಆಡಬೇಕಿತ್ತು. ಎದುರಾಳಿ ಬಾಕ್ಸರ್ ಗಾಯ ಗೊಂಡಿದ್ದರಿಂದ ಪಂದ್ಯ ನಡೆದಿರಲಿಲ್ಲ. ಮೈಮೈಟಿಯಾಲಿ ವಿರುದ್ಧದ ಪಂದ್ಯ ಮೇ ತಿಂಗಳಿನಲ್ಲೇ ನಡೆಯಬೇಕಿತ್ತು. ವೈಯಕ್ತಿಕ ಕಾರಣಗಳಿಂದಾಗಿ ಆಗ ಅವರು ರಿಂಗ್‌ಗೆ ಇಳಿಯಲು ಹಿಂದೇಟು ಹಾಕಿದ್ದರು. ಈಗ ಮತ್ತೆ ಅವರು ನನಗೆ ಸವಾಲು ಹಾಕಿದ್ದಾರೆ. ಆಗಸ್ಟ್‌ 5ರ ಹಣಾಹಣಿಯಲ್ಲಿ ಅವರ ಸವಾಲು ಮೀರಿ ನಿಲ್ಲಲಿದ್ದೇನೆ’ ಎಂದು ವಿಜೇಂದರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ವರ್ಷದಲ್ಲಿ ಎರಡು ಇಲ್ಲವೇ ಮೂರು ಹೋರಾಟಗಳಲ್ಲಿ ಭಾಗವಹಿಸಿದರೆ ಸಾಕು. ನಾನು ಯಾರನ್ನೂ ಮೆಚ್ಚಿಸಲು ಆಡುವು ದಿಲ್ಲ. ಮೈಮೈಟಿಯಾಲಿ ಹಿಂದೆ ಆಡಿರುವ ಪಂದ್ಯಗಳ ವಿಡಿಯೊ ತುಣುಕುಗಳನ್ನು ನೋಡಿದ್ದೇನೆ. ಅದಕ್ಕನುಗುಣವಾಗಿ ಕೆಲ ತಂತ್ರಗಳಲ್ಲಿ ಬದಲಾವಣೆ ಮಾಡಿಕೊಳ್ಳುತ್ತೇನೆ. ಉಳಿದಂತೆ ಅಭ್ಯಾಸ ಕ್ರಮದಲ್ಲಿ ಯಾವುದೇ ಬದಲಾವಣೆ ಮಾಡಿ ಕೊಂಡಿಲ್ಲ’ ಎಂದು ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದ ಭಾರತದ ಬಾಕ್ಸರ್‌ ನುಡಿದಿದ್ದಾರೆ.

ಪ್ರತಿಕ್ರಿಯಿಸಿ (+)