ಭಾನುವಾರ, ಡಿಸೆಂಬರ್ 8, 2019
21 °C

ತೆರಿಗೆ ವಿನಾಯ್ತಿ ನಿರ್ಧಾರಕ್ಕೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೆರಿಗೆ ವಿನಾಯ್ತಿ ನಿರ್ಧಾರಕ್ಕೆ ಸೂಚನೆ

ಬೆಂಗಳೂರು: ‘ನಗರದ ಅರಕೆರೆಯ ಆರಾಧನಾ ಶಾಲೆಗೆ ಆಸ್ತಿ ತೆರಿಗೆ ವಿನಾಯ್ತಿ ನೀಡುವುದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಒಂದು ವಾರದಲ್ಲಿ ನಿರ್ಧಾರ ಕೈಗೊಳ್ಳಬೇಕು’ ಎಂದು ಹೈಕೋರ್ಟ್‌ ಬಿಬಿಎಂಪಿಗೆ ಸೂಚಿಸಿದೆ.

ಈ ಕುರಿತ ಅರ್ಜಿಯನ್ನು ನ್ಯಾಯಮೂರ್ತಿ ಜಯಂತ ಪಟೇಲ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಶಾಲೆಗೆ ತೆರಿಗೆ ವಿನಾಯ್ತಿ ನೀಡಲು ನಿರಾಕರಿಸಿದ್ದ ಬಬಿಎಂಪಿ ಕ್ರಮಕ್ಕೆ ಬುಧವಾರಷ್ಟೇ ನ್ಯಾಯಪೀಠ ಅತೃಪ್ತಿ ವ್ಯಕ್ತಪಡಿಸಿತ್ತು. ಈ ಕುರಿತು ವಿವರಣೆ ನೀಡಲು ಬಿಬಿಎಂಪಿ ಆಯುಕ್ತರು ಕೋರ್ಟ್‌ಗೆ ಖುದ್ದು ಹಾಜರಾಗುವಂತೆಯೂ ಸೂಚಿಸಿತ್ತು.

ಗುರುವಾರ ವಿಚಾರಣೆಗೆ ಹಾಜರಾಗಿದ್ದ ಆಯುಕ್ತ ಮಂಜುನಾಥ್‌ ಪ್ರಸಾದ್ ಮತ್ತು ಸಹಾಯಕ ಕಂದಾಯ ಅಧಿಕಾರಿಗೆ ಈ ಕುರಿತಂತೆ ನ್ಯಾಯಪೀಠ, ‘ನಿಮ್ಮ ಮಕ್ಕಳು ಈ ಶಾಲೆಯಲ್ಲಿ ಕಲಿಯುತ್ತಿದ್ದರೆ ಇಂತಹ ನಿರ್ಧಾರ ಮಾಡುತ್ತಿದ್ದಿರಾ’ ಎಂದು ಪ್ರಶ್ನಿಸಿತು. ‘ಒಂದು ವಾರದಲ್ಲಿ ಪ್ರಕರಣ  ಬಗೆಹರಿಸಿ’ ಎಂದು ನಿರ್ದೇಶಿಸಿತು.

ಪ್ರತಿಕ್ರಿಯಿಸಿ (+)