ಬುಧವಾರ, ಡಿಸೆಂಬರ್ 11, 2019
20 °C

ರೈಲುಗಳನ್ನು ತಡೆದು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈಲುಗಳನ್ನು ತಡೆದು ಪ್ರತಿಭಟನೆ

ಬೆಂಗಳೂರು: ಕಾರ್ಮೆಲರಾಮ್ ರೈಲು ನಿಲ್ದಾಣದಲ್ಲಿ ನಿಗದಿತ ಸಮಯಕ್ಕೆ ರೈಲುಗಳು ಬರುತ್ತಿಲ್ಲ ಎಂದು ಆರೋಪಿಸಿ ಗುರುವಾರ ನೂರಾರು ಪ್ರಯಾಣಿಕರು ರೈಲುಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ವೈಟ್‌ಫೀಲ್ಡ್‌ನಿಂದ ಗುಂಜೂರು ಹಾಗೂ ಸರ್ಜಾಪುರ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಕಾರ್ಮೆಲ್‌ರಾಮ್ ರೈಲು ನಿಲ್ದಾಣದ ಬಳಿ ಬೆಳಿಗ್ಗೆಯೇ ಜಮಾಯಿಸಿದ್ದ ಜನರು  ನಿತ್ಯವೂ ಒಂದು ತಾಸು ತಡವಾಗಿ ಬರುತ್ತಿದ್ದ ಧರ್ಮಪುರಿ ಪ್ಯಾಸೆಂಜರ್ ರೈಲು  ತಡೆದರು.

ನಾಗರಕೊಯ್ಲು, ಪಾಂಡಿಚೇರಿ, ಹೊಸೂರು ಪ್ಯಾಸೆಂಜರ್, ಸೇಲಂ ರೈಲುಗಳನ್ನೂ ತಡೆದು ಎರಡು ತಾಸು ಪ್ರತಿಭಟನೆ ನಡೆಸಿದರು. ಇದರಿಂದ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.

ಕಾರ್ಮೆಲ್‌ರಾಮ್ ರೈಲು ನಿಲ್ದಾಣದಲ್ಲಿ ವಾಹನಗಳು ಸಂಚರಿಸದಂತೆ ರೈಲ್ವೆ ಗೇಟ್‌ನ್ನು ಹಾಕಿದ್ದರಿಂದ ಸರ್ಜಾಪುರ ಮುಖ್ಯರಸ್ತೆಯಿಂದ ವರ್ತೂರು ಮುಖ್ಯರಸ್ತೆಗೆ ಸಂಚರಿಸುವ ವಾಹನಗಳು ತಾಸುಗಟ್ಟಲೇ ರಸ್ತೆಯಲ್ಲಿ ನಿಲ್ಲುವಂತಾಯಿತು.

ಕೆಲಸಗಳಿಗೆ ತೆರಳಲು ತಡವಾದ್ದರಿಂದ ವಾಹನ ಸವಾರರು ರೈಲ್ವೆ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ನಾರಾಯಣ್ ಅವರು ಸ್ಥಳಕ್ಕೆ ಬಂದು ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಪ್ರತಿಕ್ರಿಯಿಸಿ (+)