ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸಂಖ್ಯಾ ದಿನವೇ ಕಾಂಡೋಮ್‌ಗೆ ಪ್ರತಿಭಟನೆ

Last Updated 14 ಜುಲೈ 2017, 7:18 IST
ಅಕ್ಷರ ಗಾತ್ರ

ತಿಪಟೂರು: ವಿಶ್ವ ಜನಸಂಖ್ಯಾ ದಿನದ ಅಂಗವಾಗಿ ವಿವಿಧೆಡೆ ಜಾಥಾ, ಜಾಗೃತಿ ಕಾರ್ಯ ನಡೆದ ದಿನವೇ ವಿವಾಹಿತರೊಬ್ಬರು ಸರ್ಕಾರಿ ಆಸ್ಪತ್ರೆಗೆ ಕಾಂಡೊಮ್‌ ಕೈಗೆ ಸಿಗದಿದ್ದರಿಂದ ಪ್ರತಿಭಟನೆ ನಡೆಸಿದ್ದು ಗಮನ ಸೆಳೆದಿದೆ.

ವಿಶ್ವ ಜನ ಸಂಖ್ಯಾ ದಿನವಾದ ಜು. 11ರ ಸಂಜೆ ನಗರದ ಸಾರ್ವಜನಿಕ ಆಸ್ಪತ್ರೆಗೆ ಬಂದ ಗಣೇಶ್ ಎಂಬುವರು ಆಸ್ಪತ್ರೆಗೆ ಬಂದು ಗರ್ಭ ನಿರೋಧಕ ದೊರೆಯುವ ಬಾಕ್ಸ್‌ಗಳನ್ನು ಹುಡುಕಿದರೂ ಎಲ್ಲಿಯೂ ಕಾಣಿಸಿಲ್ಲ. ಯಾವುದೇ ರೋಗಿಯಲ್ಲದ ಇವರು ಕುಟುಂಬ ಕಲ್ಯಾಣ ಯೋಜನೆಯಡಿ ಕಾಂಡೊಮ್‌ ಅನುಕೂಲ ಪಡೆಯಲು ಬಂದಿದ್ದರು.

ಆದರೆ ಅಲ್ಲಿದ್ದ ಸಿಬ್ಬಂದಿಯನ್ನು ವಿಚಾರಿಸಿದಾಗ ಸರಿಯಾಗಿ ಮಾಹಿತಿ ನೀಡದೆ ಅಸಡ್ಡೆಯಿಂದ ಮಾತನಾಡಿದ್ದಾರೆ. ಇದರಿಂದ ಬೇಸತ್ತ ಗಣೇಶ್ ಆಸ್ಪತ್ರೆ ದ್ವಾರದಲ್ಲೇ ಏಕಾಂಗಿ ಪ್ರತಿಭಟನೆ ಕುಳಿತು ಸಮಸ್ಯೆಯನ್ನು ಎತ್ತಿ ಹಿಡಿದರು. ಸುಲಭವಾಗಿ ಲಭ್ಯವಿರುವವಂತೆ ಕಾಂಡೊಮ್‌ ಇಟ್ಟಿಲ್ಲವೇಕೆ ಎಂದು ಪ್ರಶ್ನಿಸಿದರು.

ಇದು ಆಸ್ಪತ್ರೆ ಅಧಿಕಾರಿಗಳಿಗೆ ಗಮನಕ್ಕೆ ಬಂದು ಸ್ಪಂದಿಸುವವರಿಗೆ ಅವರು ಪ್ರತಿಭಟನೆ ಕುಳಿತು ಕಾಂಡೊಮ್‌ ಸಿಕ್ಕ ಮೇಲೆ ಸ್ಥಳದಿಂದ ತೆರಳಿದರು. ತರೀಕೆರೆ ತಾಲ್ಲೂಕಿನವರಾದ ಇವರು ತಾಲ್ಲೂಕಿನ ಮಡೇನೂರು ಗ್ರಾಮದಲ್ಲಿ ಮದುವೆಯಾಗಿದ್ದಾರೆ. ಮಡದಿ ಮನೆಗೆ ಬಂದಿದ್ದಾಗ ಅವರು ಆಸ್ಪತ್ರೆಗೆ ಬಂದು ಕಾಂಡೊಮ್‌ಗಾಗಿ ಹುಡುಕಾಟ ನಡೆಸಿದ ನಂತರ ಈ ಘಟನೆ ನಡೆದಿದೆ.

ಪ್ರತಿಭಟನೆ ಕುಳಿತ ಸುದ್ದಿ ತಿಳಿದು ಆಸ್ಪತ್ರೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮೊದಲ ಅಂತಸ್ತಿನ ಐಸಿಡಿಸಿ ಕೇಂದ್ರದಲ್ಲಿದ್ದ ಕಾಂಡೊಮ್‌ಗಳನ್ನು ನೀಡಿ ಮನವೊಲಿಸಲು ಪ್ರಯತ್ನಿಸಿದರು. ಆದರೆ ಅವು ಆಕರ್ಷಕವಾಗಿದ್ದರಿಂದ ಮೆಡಿಕಲ್ ಶಾಪ್‌ನಿಂದ ತಂದು ಕೊಟ್ಟಿದ್ದೀರಿ ಎಂದು ಅನುಮಾನಿಸಿದ ಗಣೇಶ್, ಆಸ್ಪತ್ರೆಯಲ್ಲೇಕೆ ಕಾಂಡೊಮ್‌ ಇಟ್ಟಿಲ್ಲ.

ಅಷ್ಟಲ್ಲದೆ ಕುಟುಂಬ ಕಲ್ಯಾಣ ಇಲಾಖೆ ಯೋಜನೆಯಡಿ ಸರಬರಾಜು ಮಾಡಿಲ್ಲವೇ ಎಂದು ಪ್ರಶ್ನಿಸಿದರು. ಅವರು ಸರ್ಕಾರ ಸರಬರಾಜು ಮಾಡಿದ ಕಾಂಡೊಮ್‌ಗಳೇ ಆಗಿದ್ದು, ಅವು ಈಗ ಆಕರ್ಷಕ ರೀತಿಯಲ್ಲಿ ಬರುತ್ತಿರುವುದರಿಂದ ಮೆಡಿಕಲ್ ಶಾಪ್‌ನಲ್ಲಿ ತಂದಂತೆ ಕಾಣುತ್ತಿವೆ ಎಂದು ತಿಳಿಸಿ ಮನವೊಲಿಸಿದರು. ಆಸ್ಪತ್ರೆ ಮತ್ತು ಐಸಿಡಿಸಿ ಹಾಗೂ ಎಆರ್‌ಟಿ ಕೇಂದ್ರದಲ್ಲಿ ಸಾಕಷ್ಟು ಕಾಂಡೊಮ್‌ ಲಭ್ಯವಿವೆ. ಆದರೆ ಅವು ದುರುಪಯೋಗವಾಗುತ್ತಿದ್ದರಿಂದ ಸಾರ್ವಜನಿಕವಾಗಿ ಡಬ್ಬಿಗಳಲ್ಲಿ ಇಟ್ಟಿರಲಿಲ್ಲ ಎಂದು ತಿಳಿಸಿದರು

ಸಾರ್ವಜನಿಕ ಆಸ್ಪತ್ರೆಯ ಹೊರ ರೋಗಿಗಳ ವಿಭಾಗ, ಎಆರ್‌ಟಿ ಮತ್ತು ಐಸಿಡಿಸಿ ಕೇಂದ್ರಗಳಲ್ಲಿ ಸಾಕಷ್ಟು ನಿರೋಧ್‌ಗಳನ್ನು ಇಡಲಾಗಿದೆ. ಆದರೆ ಸಾರ್ವಜನಿಕವಾಗಿ ಡಬ್ಬಗಳಲ್ಲಿ ಇಟ್ಟಿಲ್ಲವೆಂಬುದು ನಿಜ. ಈಚೆಗೆ ಸರ್ಕಾರ ಪೂರೈಸುತ್ತಿರುವ ಮೆಡಿಕಲ್ ಶಾಪ್‌ಗಳಲ್ಲಿ ದೊರೆಯುವ ಕಾಂಡೋಮ್‌ಗಳಂತೆ ಆಕರ್ಷಕವಾಗಿವೆ. ಹಾಗಾಗಿ ಡಬ್ಬಗಳಲ್ಲಿ ಇಟ್ಟರೆ ಕೆಲವರು ಬಾಚಿಕೊಂಡು ಹೋಗುತ್ತಿದ್ದಾರೆ. ಇದಲ್ಲದೆ ಕಿಡಿಗೇಡಿಗಳು ಕಾಂಡೊಮ್‌ಗಳನ್ನು ಹೊಯ್ದು ಹೊರಗೆ ಬಲೂನಿನಂತೆ ಊದಿ ಬಿಡುತ್ತಿದ್ದರು.

ಆಗಲೂ ಸಾರ್ವಜನಿಕರಿಂದ ಆರೋಪ ಕೇಳಬೇಕಿತ್ತು. ಹಾಗಾಗಿ ಡಬ್ಬಗಳಲ್ಲಿ ಹಾಕಿಡುವುದನ್ನು ನಿಲ್ಲಿಸಲಾಗಿತ್ತು. ಕೇಳಿದವರಿಗೆ ಹೊರ ರೋಗಿಗಳ ವಿಭಾಗದಲ್ಲಿ, ತುರ್ತು ರೋಗಿಗಳ ವಾರ್ಡ್‌ನಲ್ಲಿ ಕಾಂಡೊಮ್‌ ಕೊಡುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ಗಣೇಶ್ ಪ್ರತಿಭಟನೆ ನಡೆಸಿದ ನಂತರ ಶೌಚಾಲಯ ಮತ್ತಿತರರ ಸೂಕ್ತ ಸ್ಥಳಗಳಲ್ಲಿ ಡಬ್ಬದಲ್ಲಿ ಕಾಂಡೊಮ್‌ ಇಡಲು ನಿರ್ಧರಿಸಲಾಗಿದೆ ಎಂದರು.

ಆಕರ್ಷಕ ಕಾಂಡೋಮ್
ಈಗ ಸರ್ಕಾರ ಸರಬರಾಜು ಮಾಡುತ್ತಿರುವ ಕಾಂಡೊಮ್‌ಗಳು ಮೆಡಿಕಲ್ ಶಾಪ್‌ಗಳಲ್ಲಿ ಸಿಗುವ ನಿರೋಧಗಳಂತೆಯೇ ಆಕರ್ಷಕ ಹೊರ ಕವಚವನ್ನು ಹೊಂದಿವೆ. ಮೊದಲು ಸರ್ಕಾರಿ ಸರಬರಾಜಿನ ನಿರೋಧಗಳೆಂದರೆ ಮೂಗು ಮುರಿಯುತ್ತಿದ್ದ ಜನರು ಸರ್ಕಾರಿ ಸರಬರಾಜಿನ ಗುಣಮಟ್ಟದ ಕಾಂಡೋಮ್‌ಗಳ ಕಡೆ ಆಕರ್ಷಿತರಾಗಿದ್ದಾರೆ. ಈ ಕಾರಣಕ್ಕೆ ಆಸ್ಪತ್ರೆಗಳಲ್ಲಿ ಹೆಚ್ಚು ಕಾಂಡೊಮ್‌ಗಳು ಖರ್ಚಾಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT