ಬುಧವಾರ, ಡಿಸೆಂಬರ್ 11, 2019
24 °C

‘ನಿಮ್ಮ ದೇಹದ ಆಕಾರ ತುಂಬಾ ಚೆನ್ನಾಗಿದೆ. ನೀವು ಕೂಡ ತುಂಬಾ ಸುಂದರವಾಗದ್ದೀರಿ’

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

‘ನಿಮ್ಮ ದೇಹದ ಆಕಾರ ತುಂಬಾ ಚೆನ್ನಾಗಿದೆ. ನೀವು ಕೂಡ ತುಂಬಾ ಸುಂದರವಾಗದ್ದೀರಿ’

ಪ್ಯಾರಿಸ್‌: ‘ನಿಮ್ಮ ದೇಹದ ಆಕಾರ ತುಂಬಾ ಚೆನ್ನಾಗಿದೆ. ನೀವು ತುಂಬಾ ಸುಂದರವಾಗದ್ದೀರಿ!’ ಎಂದು ಫ್ರಾನ್ಸ್‌ ಅಧ್ಯಕ್ಷರ ಪತ್ನಿಯನ್ನು ಹೊಗಳುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದಾರೆ.

ಫ್ರಾನ್ಸ್‌ ಪ್ರವಾಸದಲ್ಲಿರುವ ಡೊನಾಲ್ಡ್‌ ಟ್ರಂಪ್‌ ಅವರು ಏಕಾಏಕಿ ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರಾನ್‌ ಅವರ ಪತ್ನಿ ಬಿಗ್ಗಟೆ ಮ್ಯಾಕ್ರನ್‌ ಅವರನ್ನು ಹೊಗಳಿ ಬಿಟ್ಟರು. ಈ ಹೊಗಳಿಕೆಯ ಮಾತುಗಳು ಕ್ಯಾಮೆರದಲ್ಲಿ ಸೆರೆಯಾಗಿವೆ. ಟ್ರಂಪ್‌ ಅವರು ಮಿಸಸ್‌ ಮ್ಯಾಕ್ರನ್‌ ಅವರನ್ನು ಹೊಗಳುತ್ತಿರುವ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಟ್ರಂಪ್‌ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ‘ಟ್ರಂಪ್ ಅವರ ಹೊಗಳಿಕೆ ಸೆಕ್ಸಿಯಾಗಿತ್ತು’ ಎಂದು ಕೆಲವರು ಟೀಕಿಸಿದ್ದಾರೆ.

‘ಇದು ಟ್ರಂಪ್‌ ಅವರ ಕೊಳಕು ಮನಸ್ಥಿತಿಯನ್ನು ತೋರುತ್ತದೆ’ ಎಂದು ಕೆಲವರು ಟ್ವೀಟ್‌ ಮಾಡಿದ್ದಾರೆ. ಇನ್ನು ಕೆಲವರು, ‘ಟ್ರಂಪ್‌ ಒಬ್ಬ ವಿಕೃತಕಾಮಿ’ ಎಂದು ಟ್ವೀಟ್‌ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)