ಸೋಮವಾರ, ಡಿಸೆಂಬರ್ 9, 2019
26 °C
ಸಲೀಂ ಹತ್ತಿ ವ್ಯಾಪಾರಿ

ಮಹಾರಾಷ್ಟ್ರದಲ್ಲಿ ಗೋರಕ್ಷಕರಿಂದ ಹಲ್ಲೆಗೊಳಗಾದ ವ್ಯಕ್ತಿ ಬಿಜೆಪಿ ಮುಖಂಡ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಮಹಾರಾಷ್ಟ್ರದಲ್ಲಿ ಗೋರಕ್ಷಕರಿಂದ ಹಲ್ಲೆಗೊಳಗಾದ ವ್ಯಕ್ತಿ ಬಿಜೆಪಿ ಮುಖಂಡ

ನಾಗಪುರ: ದನದ ಮಾಂಸ ಸಾಗಿಸುತ್ತಿದ್ದಾರೆಂಬ ಶಂಕೆಯಿಂದ ಮಹಾರಾಷ್ಟ್ರದ ನಾಗಪುರ ಜಿಲ್ಲೆಯ ಭರಸಿಂಗಿ ಗ್ರಾಮದಲ್ಲಿ ಬುಧವಾರ ಹಲ್ಲೆಗೊಳಗಾದ ಸಲೀಂ ಇಸ್ಮಾಯಿಲ್‌ ಶೇಖ್‌ ಬಿಜೆಪಿ ಮುಖಂಡ ಎಂಬುದು ಗೊತ್ತಾಗಿದೆ.

ಸಲೀಂ ಇಸ್ಮಾಯಿಲ್‌ ಬಿಜೆಪಿಯ ಕಾಟೋಲ್‌ ತಾಲ್ಲೂಕು ಘಟಕದ ಅಲ್ಪಸಂಖ್ಯಾತರ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಅವರು ಬಿಜೆಪಿ ಮುಖಂಡ ಎಂಬುದು ತಿಳಿಯದೆ ಗೋರಕ್ಷಕರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ಹಲ್ಲೆಗೊಳಗಾಗಿದ್ದ ಸಲೀಂ

ಸಲೀಂ ಸಮಾರಂಭವೊಂದಕ್ಕೆ ಅಡುಗೆ ತಯಾರಿಸಲು ಬೈಕ್‌ನಲ್ಲಿ ಮಾಂಸ ತೆಗೆದುಕೊಂಡು ಹೋಗುತ್ತಿದ್ದರು. ಭರಸಿಂಗಿಯಲ್ಲಿ ಅವರ ಬೈಕ್‌ ತಡೆದಿದ್ದ ಗೋ ರಕ್ಷಕರ ಗುಂಪು, ಸಲೀಂ ದನದ ಮಾಂಸ ವ್ಯಾಪಾರಿ ಎಂದು ಆರೋಪಿಸಿ ಅವರ ಮೇಲೆ ಹಲ್ಲೆ ನಡೆಸಿತ್ತು. ಹಲ್ಲೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

ಆದರೆ, ಗೋ ರಕ್ಷಕರ ಆರೋಪವನ್ನು ಅಲ್ಲಗಳೆದಿರುವ ಸಲೀಂ ಅವರ ಪತ್ನಿ ಜರೀನ್‌, ‘ನನ್ನ ಪತಿ ದನದ ಮಾಂಸದ ವ್ಯಾಪಾರಿಯಲ್ಲ. ಅವರು ಹತ್ತಿ ವ್ಯಾಪಾರಿ. ಬುಧವಾರ ಅವರು ಸ್ಥಳೀಯ ಮಸೀದಿಯಲ್ಲಿ ನಡೆಯುತ್ತಿದ್ದ ಸಮಾರಂಭದ ಅಡುಗೆಗೆ ಬೇಕಾದ ಮಾಂಸ ತೆಗೆದುಕೊಂಡು ಹೋಗುತ್ತಿದ್ದರು’ ಎಂದು ಹೇಳಿದ್ದಾರೆ.

ಹಲ್ಲೆ ನಡೆಸಿದ ನಾಲ್ಕು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ...
ಗೋಮಾಂಸ ಸಾಗಣೆ ಆರೋಪ: ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ

ಪ್ರತಿಕ್ರಿಯಿಸಿ (+)