ಶನಿವಾರ, ಡಿಸೆಂಬರ್ 14, 2019
21 °C

ಭಾರತದಿಂದ ದೂರವಾಗಿ ಕಳೆದುಕೊಳ್ಳುವಂತಹದ್ದು ಏನೂ ಇಲ್ಲ: ವಿಜಯ್‌ ಮಲ್ಯ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಭಾರತದಿಂದ ದೂರವಾಗಿ ಕಳೆದುಕೊಳ್ಳುವಂತಹದ್ದು ಏನೂ ಇಲ್ಲ: ವಿಜಯ್‌ ಮಲ್ಯ

ಸಿಲ್ವರ್‌ಸ್ಟೋನ್‌: ಸಿಲ್ವರ್‌ಸ್ಟೋನ್‌: ಭಾರತದ ವಿವಿಧ ಬ್ಯಾಂಕ್‌ಗಳಲ್ಲಿ ₹900 ಕೋಟಿ ಸಾಲ ಪಡೆದು ಮರುಪಾವತಿ ಮಾಡದೆ ಒಂದು ವರ್ಷದಿಂದ ಬ್ರಿಟನ್‌ನಲ್ಲಿ ನೆಲೆಸಿರುವ ಉದ್ಯಮಿ ವಿಜಯ್‌ ಮಲ್ಯ, ಇದೀಗ ಭಾರತದಿಂದ ದೂರವಾಗಿ ನಾನು ಕಳೆದುಕೊಳ್ಳುವಂತಹದ್ದು ಏನೂ ಇಲ್ಲ ಎಂದಿದ್ದಾರೆ.

ವಿಜಯ್‌ ಮಲ್ಯ ಕ್ರೀಡಾಸಕ್ತರಾಗಿದ್ದು, ಇತ್ತೀಚೆಗೆ ಕ್ರಿಕೆಟ್‌, ಫಾರ್ಮುಲಾ ಒನ್‌ ರೇಸ್‌ ವಿಂಬಲ್ಡನ್‌ ಟೆನಿಸ್‌ ಚಾಂಪಿಯನ್‌ಷಿಪ್‌ ವೀಕ್ಷಣೆಗೆ ಬಂದಿದ್ದ ವೇಳೆ ಕಾಣಿಸಿಕೊಂಡಿದ್ದರು.

ಭಾರತದಿಂದ ದೂರವಾಗುತ್ತಿದ್ದೀರಾ? ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಮಲ್ಯ, ‘ಭಾರತದಿಂದ ದೂರವಾಗಿ ಕಳೆದುಕೊಳ್ಳುವಂತಹದ್ದೇನೂ ಇಲ್ಲ’ ಎಂದಿದ್ದಾರೆ.

‘ನನ್ನ ಕುಟುಂಬ ಸದಸ್ಯರು ಬ್ರಿಟನ್‌ ಅಥವಾ ಅಮೆರಿಕದಲ್ಲಿ ನೆಲೆಸಿದ್ದಾರೆ. ಭಾರತದಲ್ಲಿ ಯಾರೂ ಇಲ್ಲ. ಆದ್ದರಿಂದ, ಭಾರತದಿಂದ ದೂವಾರವಾಗಿ ಕಳೆದುಕೊಳ್ಳುವಂತಹದ್ದು ಏನೂ ಇಲ್ಲ’ ಎಂದಿದ್ದಾರೆ.

ಭಾರತದ ವಿವಿಧ ಬ್ಯಾಂಕ್‌ಗಳಲ್ಲಿ ₹900 ಕೋಟಿ ಸಾಲ ಪಡೆದು ಮರು ಪಾವತಿ ಮಾಡದೆ ಬಹುಕೋಟಿ ಬಾಕಿದಾರ ಎಂಬ ಆರೋಪ ಎದುರಿಸುತ್ತಿರುವ 61 ವರ್ಷದ ಉದ್ಯಮಿ ವಿಜಯ್‌ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಇತ್ತೀಚೆಗೆ ಭಾರತ ಬ್ರಿಟನ್‌ಗೆ ಮನವಿ ಮಾಡಿದೆ.

‘ಭಾರತದಿಂದ ನನ್ನನ್ನು ಭೇಟಿ ಮಾಡುವ ಕೆಲಸ ನಡೆಯುತ್ತಿದೆ. ನಾನು(ಇಂಗ್ಲೆಂಡ್‌ನಲ್ಲಿ) 1992ರಿಂದ ವಾಸವಾಗಿದ್ದೇನೆ, ಇದು ನನಗೆ ಎರಡನೇ ಮನೆಯಾಗಿದೆ’ ಎಂದಿದ್ದಾರೆ.

ಪ್ರತಿಕ್ರಿಯಿಸಿ (+)