ಸೋಮವಾರ, ಡಿಸೆಂಬರ್ 9, 2019
26 °C

ಬಾರಾಕಮಾನಿನಲ್ಲಿ ಸ್ವಚ್ಛತಾ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾರಾಕಮಾನಿನಲ್ಲಿ ಸ್ವಚ್ಛತಾ ಅಭಿಯಾನ

ವಿಜಯಪುರ: ಅಂಚೆ ಇಲಾಖೆಯ ಜಿಲ್ಲಾ ಮುಖ್ಯಸ್ಥ ಕೆ.ದಿನಕರ ಸಹಿತ ನೂರಕ್ಕೂ ಹೆಚ್ಚು ಸಿಬ್ಬಂದಿ ತಮ್ಮ ನಿತ್ಯದ ಕೆಲಸ ಬಿಟ್ಟು, ಮೂರು ತಾಸು ನಗರದ ಐತಿಹಾ ಸಿಕ ಬಾರಾಕಮಾನ ಸ್ಮಾರಕದ ಸುತ್ತ ಮುತ್ತಲಿನ ಪ್ರದೇಶವನ್ನು ಮಂಗಳವಾರ ಸ್ವಚ್ಛಗೊಳಿಸಿದರು.

ಬೆಳಿಗ್ಗೆ 7 ಗಂಟೆಗೆ ಶುರುವಾದ ಸ್ವಚ್ಛತಾ ಕೆಲಸಕ್ಕೆ ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ಚಾಲನೆ ನೀಡಿದರು. ಸ್ವಚ್ಛತೆಯ ಕೆಲಸದಲ್ಲಿ ಎಲ್ಲ ಅಂಚೆ ಇಲಾಖೆ ಸಿಬ್ಬಂದಿ ಪಾಲ್ಗೊಂಡಿರುವುದು ಇತರ ಇಲಾಖೆಯವರಿಗೆ ಮಾದರಿ’ ಎಂದು ಹೇಳಿದರು.

ಅಂಚೆ ಇಲಾಖೆ ಜಿಲ್ಲಾ ಅಧೀಕ್ಷಕ ಕೆ.ದಿನಕರ ಮಾತನಾಡಿ ‘ದೇಶದ ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆಯಂತೆ ಸ್ವಚ್ಛತಾ ಆಂದೋಲನದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

ಸ್ವಚ್ಛತೆ ಎನ್ನುವ ಶಬ್ಧಕ್ಕೆ ಬಹಳ ಅರ್ಥವಿದ್ದು, ಹೊರಗೆ ಕಾಣುವ ಸ್ವಚ್ಛತೆ ಅಲ್ಲದೇ, ಎಲ್ಲ ರೀತಿಯ ಆಂತರಿಕ ಶುದ್ಧತೆ, ಸ್ವಚ್ಛ ಆಡಳಿತಕ್ಕೆ ನಾವು ಬದ್ಧ ರಾಗಬೇಕು. ನಮ್ಮ ಕಚೇರಿ ಕೆಲಸಗಳಲ್ಲಿ ನಿತ್ಯದ ಕೆಲಸ ಮಾಡುವುದರ ಜತೆಗೆ ಸಮಾಜಮುಖಿಯಾಗಿ ಕೆಲಸ ಮಾಡುವು ದರಿಂದ ಹೆಚ್ಚು ಖುಷಿ ಸಿಗುತ್ತದೆ’ ಎಂದು ಹೇಳಿದರು.

ಸ್ವಚ್ಛತಾ ಅಭಿಯಾನದಲ್ಲಿ ಮಹಾ ನಗರ ಪಾಲಿಕೆ ಸದಸ್ಯ ರಾಜೇಶ ದೇವಗಿರಿ, ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳಾದ ಶ್ರೀನಿಧಿ ಕೆ, ಎಚ್.ಬಿ.ಹಸಬಿ, ಸರೋಜಾ     ಇಲಕಲ್ಲ, ಸಂತೋಷ ಬಿರಾದಾರ, ಶಿವಾನಂದ ವಾಲೀಕಾರ, ಪ್ರಧಾನ ಅಂಚೆ ಕಚೇರಿ ಪೋಸ್ಟ್‌ ಮಾಸ್ಟರ್ ಎಸ್.ಕೆ.ಲಾಹೋರಿ, ಮಾರುಕಟ್ಟೆ ವಿಸ್ತರಣಾಧಿಕಾರಿ ಪಿ.ಟಿ. ಕಬಾಡೆ, ಎ.ಎ.ಖಾನಾಪುರ, ಎಸ್.ವಿ. ರಾಂಪುರ, ಸುಜಾತಾ ಕೊಪ್ಪದ, ಗಂಗೂಬಾಯಿ ತೆನಿಹಳ್ಳಿ, ಸುಮನ್ ಹುದ್ದಾರ, ಜಯಶ್ರೀ ಇಂಗಳೆ, ರಾಕೇಶ ಅಲದಿ, ವೈ.ಎಚ್.ಕುಲಕರ್ಣಿ, ಸಂತೋಷ ರ್‍್ಯಾವಂಕಿ, ಮಹಾಂತೇಶ ಕುರ್ಲೆ, ಸತೀಶ ಹೊಳಿ, ಸುನೀತಾ ಕುಲಕರ್ಣಿ, ಶೋಭಾ ಸಾಳುಂಕೆ, ರವಿ ನಾಟೀಕಾರ, ಮಲ್ಲಮ್ಮ ಇವಣಗಿ, ಕಪಟಕರ, ಸದಾಶಿವ ತೊರವಿ, ಮಡಕೇಶ್ವರ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)