ಭಾನುವಾರ, ಡಿಸೆಂಬರ್ 8, 2019
21 °C

ಪ್ರಧಾನಿ ಮೋದಿ ಸರ್ಕಾರ ವಿಶ್ವದಲ್ಲಿ ಅತಿ ಹೆಚ್ಚು ವಿಶ್ವಾಸರ್ಹತೆ ಹೊಂದಿದೆ: ವರದಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಪ್ರಧಾನಿ ಮೋದಿ ಸರ್ಕಾರ ವಿಶ್ವದಲ್ಲಿ ಅತಿ ಹೆಚ್ಚು ವಿಶ್ವಾಸರ್ಹತೆ ಹೊಂದಿದೆ: ವರದಿ

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವ ಕೇಂದ್ರ ಸರ್ಕಾರ ವಿಶ್ವದಲ್ಲಿ ಅತಿ ಹೆಚ್ಚು ವಿಶ್ವಾಸಾರ್ಹತೆ ಹೊಂದಿದೆ’ ಎಂದು ಅಂತರರಾಷ್ಟ್ರೀಯ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ(ಒಇಸಿಡಿ) ವರದಿಯಲ್ಲಿ ತಿಳಿಸಿದೆ.

ದೇಶದಲ್ಲಿ ಶೇಕಡಾ 73ರಷ್ಟು ಜನರು ಪ್ರಧಾನಿ ಮೋದಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ವಿವಿಧ ರಾಷ್ಟ್ರಗಳ ಸರ್ಕಾರಗಳ ಮೇಲೆ ಅಲ್ಲಿನ ಜನರು ಹೊಂದಿರುವ ವಿಶ್ವಾಸಾರ್ಹತೆಯನ್ನು ವಿಶ್ಲೇಷಿಸಲಾಗಿದೆ. ಆರ್ಥಿಕ, ಸಾಮಾಜಿಕ ಹಾಗೂ ಪರಿಸರದ ಬದಲಾವಣೆ ಅಂಶಗಳನ್ನು ಆಧಾರಿಸಿ ಕೇಂದ್ರ ಸರ್ಕಾರದ ಕಾರ್ಯವೈಖರಿಯನ್ನು ವಿಶ್ಲೇಷಿಸಲಾಗಿದೆ.‌

2014ರಲ್ಲಿ ನರೇಂದ್ರ ಮೋದಿ ನೇತೃತ್ವ ಬಿಜೆಪಿ ಸರ್ಕಾರ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಜತೆಗೆ, ಸರ್ಕಾರ ಘೋಷಿಸಿದ ಆರ್ಥಿಕ ಹಾಗೂ ಸಾಮಾಜಿಕ ‍ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದೆ. 

ಭಾರತದ ನಂತರ ಕೆನಡದ ಪ್ರಧಾನಿ ಜಸ್ಟಿನ್ ಟ್ರುಡಿಯು ಅವರ ನೇತೃತ್ವದ ಸರ್ಕಾರ ಶೇ 62 ಎಷ್ಟು ಬೆಂಬಲ ಗಳಿಸಿದೆ. ಜತೆಗೆ, ಟರ್ಕಿ ಶೇ 58 ರಷ್ಟು ಬೆಂಬಲದೊಂದಿಗೆ ಮೂರನೇ ಸ್ಥಾನದಲ್ಲಿದೆ.

ಬ್ರೆಕ್ಸಿಟ್‌ (ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರ ಹೋಗುವುದು) ನಂತರ ಬ್ರಿಟನ್‌ ಪ್ರಧಾನಿ ತೆರೆಸಾ ಮೇ ನೇತೃತ್ವದ ಸರ್ಕಾರ ಒಇಸಿಡಿ ಪಟ್ಟಿಯಲ್ಲಿ  5ನೇ ಸ್ಥಾನ ಹೊಂದಿದೆ. ನಂತರದ ಸ್ಥಾನವನ್ನು ಜಪಾನ್‌ ಹಾಗೂ ಅಮೆರಿಕ ರಾಷ್ಟ್ರಗಳು ಸ್ಥಾನ ಪಡೆದಿವೆ.

ಪ್ರತಿಕ್ರಿಯಿಸಿ (+)