ಶುಕ್ರವಾರ, ಡಿಸೆಂಬರ್ 13, 2019
17 °C

ಗಿನಿಸ್‌ ದಾಖಲೆ ಬರೆದ ಮುಹಮ್ಮದ್ ರಶೀದ್

ದೀಪಕ್ ಗೌಡ Updated:

ಅಕ್ಷರ ಗಾತ್ರ : | |

ಗಿನಿಸ್‌ ದಾಖಲೆ ಬರೆದ ಮುಹಮ್ಮದ್ ರಶೀದ್

ಪಾಕಿಸ್ತಾನದ ಕರಾಚಿಯ ಮುಹಮ್ಮದ್ ರಶೀದ್ 30 ಸೆಕೆಂಡ್‌ಗಳಲ್ಲಿ 29 ಪಾನೀಯದ ಟಿನ್‌ಗಳನ್ನು ಜಜ್ಜುವ ಮೂಲಕ ಗಿನ್ನಿಸ್‌ ದಾಖಲೆ ನಿರ್ಮಿಸಿದ್ದಾರೆ. ನಾವೂ ಜಜ್ಜಿ ಹಾಕಬಹುದಪ್ಪಾ ಅಂತೀರಾ? ರಶೀದ್‌ ಅವರು ಯಾವ ಕೈಯಿಂದ ಟಿನ್‌ಗಳನ್ನು ಜಜ್ಜಿಹಾಕಿದರೋ ಅದೇ ಕೈಯಲ್ಲಿ ಮೊಟ್ಟೆ ಹಿಡಿದಿಟ್ಟುಕೊಂಡಿದ್ದರು. ಅಷ್ಟೇ ಅಲ್ಲ, ಟಿನ್‌ಗಳನ್ನು ಜಜ್ಜಿ ಮುಗಿಸಿದರೂ ಮೊಟ್ಟೆಗೆ ಕಿಂಚಿತ್ತೂ ಹಾನಿಯಾಗಲಿಲ್ಲವಂತೆ!

ಏನಿದು ಸವಾಲು?

ತಮ್ಮ ಬಲ ಮುಷ್ಟಿಯಲ್ಲಿ ಮೊಟ್ಟೆಯನ್ನು ಇಟ್ಟುಕೊಂಡು ಅದು ಒಡೆಯದಂತೆ ಎಚ್ಚರವಹಿಸಿದ ರಶೀದ್, ಪ್ರತಿ ಸೆಕೆಂಡಿಗೆ ಒಂದು ಪಾನೀಯ ಟಿನ್‌ನಂತೆ 30 ಸೆಕೆಂಡ್ ಸಮಯದಲ್ಲಿ 29 ಪಾನೀಯ ಟಿನ್‌ಗಳನ್ನು ಒಡೆದು ದಾಖಲೆ ಮಾಡಿದ್ದಾರೆ. ಮೇಜಿನ ಮೇಲಿದ ಎಲ್ಲಾ ಟಿನ್‌ಗಳನ್ನು ಜಜ್ಜಿದ ಬಳಿಕ ಮೊಹಮ್ಮದ್‌ ತಮ್ಮ ಕೈಯಲಿದ ಮೊಟ್ಟೆ ಒಡೆಯದೆ ಹಾಗೇ ಇರುವುದನ್ನು ಸಾರ್ವಜನಿಕರಿಗೆ ತೋರಿಸುತ್ತಿದ್ದಂತೆ ಚಪ್ಪಾಳೆ ಸುರಿಮಳೆ ಬಿದ್ದವು.

ಈ ಸಾಧನೆಯ ಜತೆಗೆ ಮೊಹಮ್ಮದ್‌ ರಶೀದ್‌ ಮತ್ತಷ್ಟು ಕಸರತ್ತುಗಳಿಗೆ ಕೈಹಾಕಿ ಜಯ ಸಾಧಿಸಿದ್ದರು. ಒಂದು ನಿಮಿಷದಲ್ಲಿ ತಂಪು ಪಾನೀಯದ ಬಾಟಲಿಗಳನ್ನು ಒಡೆಯುವುದು, ಒಂದು ನಿಮಿಷದಲ್ಲಿ ತಲೆಯಿಂದಲ್ಲೇ ಬಾಟಲಿಗಳ ಮುಚ್ಚಳ ತೆಗೆಯುವುದು, ಜತೆಗೆ ಅಷ್ಟೇ ಸಮಯದಲ್ಲಿ ತಲೆಯಲ್ಲಿ ತೆಂಗಿನಕಾಯಿಗಳನ್ನು ಒಡೆದು ತಮ್ಮ ಸಾಹಸವನ್ನು ಪ್ರದರ್ಶಿಸಿದ್ದಾರೆ. ಮೊಹಮ್ಮದ್‌ ರಶೀದ್‌ ಅವರ ಸಾಹಸಮಯ ವಿಡಿಯೊಗಳು ಯುಟ್ಯೂಬ್‌ನಲ್ಲಿ ಲಭ್ಯ.

ಪ್ರತಿಕ್ರಿಯಿಸಿ (+)