ಸೋಮವಾರ, ಡಿಸೆಂಬರ್ 9, 2019
24 °C

ಬೆಂಕಿ ಹಚ್ಚುವುದು ಬಿಜೆಪಿ-ಸಂಘ ಪರಿವಾರದ ಸಂಸ್ಕಾರ; ನಮ್ಮದು ಬೆಂಕಿ ಆರಿಸಿ, ಬೆಳಕು ಹಚ್ಚುವ ಸಂಸ್ಕಾರ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಕಿ ಹಚ್ಚುವುದು ಬಿಜೆಪಿ-ಸಂಘ ಪರಿವಾರದ ಸಂಸ್ಕಾರ; ನಮ್ಮದು ಬೆಂಕಿ ಆರಿಸಿ, ಬೆಳಕು ಹಚ್ಚುವ ಸಂಸ್ಕಾರ: ಸಿದ್ದರಾಮಯ್ಯ

ಮೈಸೂರು: ಬೆಂಕಿ ಹಚ್ಚುವುದರಲ್ಲಿ ಬಿಜೆಪಿಯವರು ನಿಸ್ಸೀಮರು. ಅವರು ಹಚ್ಚಿದ ಕಿಡಿಯನ್ನು ಆರಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಗೆ ತಿರುಗೇಟು ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದಕ್ಷಿಣ ಕನ್ನಡ ಜಿಲ್ಲೆ ಹೊತ್ತಿ ಉರಿಯುತ್ತದೆ ಎಂಬ ಎಚ್ಚರಿಕೆಯನ್ನು ಸಂಸದ ನಳೀನ್‌ ಕುಮಾರ್‌ ಕಟೀಲು ನೀಡಿದ್ದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಕೂಡ ಇಂತಹದೇ ಮಾತುಗಳನ್ನು ಆಡಿದ್ದಾರೆ. ಇದು ಅವರ ರಾಜಕೀಯ ಸಂಸ್ಕೃತಿಯನ್ನು ತೋರಿಸುತ್ತಿದೆ’ ಎಂದರು.

‘ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಅವರ ಕುರಿತು ನಾನು ಯಾವ ಮಾತೂ ಆಡಿಲ್ಲ. ಆದರೆ, ಬಿಜೆಪಿಯವರೇ ಪದೇ ಪದೇ ಅವರ ತಂಟೆಗೆ ಬನ್ನಿ ಎಂಬ ಆಹ್ವಾನ ನೀಡುತ್ತಿದ್ದಾರೆ. ಪಾಪಪ್ರಜ್ಞೆಯಿಂದ ಇಂತಹ ಮಾತುಗಳು ಹೊರಬರುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ನೆಲೆಸುವುದು ಬಿಜೆಪಿಯವರಿಗೆ ಬೇಕಾಗಿಲ್ಲ. ಹೀಗಾಗಿಯೇ ಅವರು ಶಾಂತಿ ಸಭೆಯಲ್ಲಿ ಭಾಗವಹಿಸಿಲ್ಲ. ಬೆಂಕಿ ಆರಿದರೆ ಅವರ ಬೇಳೆ ಬೇಯುವುದಿಲ್ಲ’ ಎಂದು ಕಿಡಿ ಕಾರಿದರು.

‘ಯಡಿಯೂರಪ್ಪ ಅವರಿಗೆ 75 ವರ್ಷ ತುಂಬಿದೆ. ಮುಂಬರುವ ಚುನಾವಣೆಯೇ ಅವರಿಗೆ ಕೊನೆಯ ಅವಕಾಶ. ಅಧಿಕಾರ ಹಿಡಿಯುವುದೇ ಅವರ ಮುಂದಿರುವ ಗುರಿ. ಆದರೆ, ಅದು ಸಾಧ್ಯವಿಲ್ಲ ಎಂಬುದು ಮನವರಿಕೆಯಾಗಿದೆ. ಹೀಗಾಗಿ, ಇಂತಹ ಗಲಬೆ ಸೃಷ್ಟಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಪ್ರತಿಕ್ರಿಯಿಸಿ (+)