ಭಾನುವಾರ, ಡಿಸೆಂಬರ್ 8, 2019
21 °C

ಜೆಮಿನಿ ಗಣೇಶನ್ ಆಗಿ ದುಲ್ಕರ್‌

Published:
Updated:
ಜೆಮಿನಿ ಗಣೇಶನ್ ಆಗಿ ದುಲ್ಕರ್‌

‘ಮಹಾನದಿ’ ಚಿತ್ರದಲ್ಲಿ ತಮಿಳು ಚಿತ್ರರಂಗದ ದಂತಕತೆ ಜೆಮಿನಿ ಗಣೇಶನ್‌ ಪಾತ್ರವನ್ನು ನಿರ್ವಹಿಸುತ್ತಿರುವ ಮಲಯಾಳಂ ನಟ ದುಲ್ಕರ್ ಸಲ್ಮಾನ್‌ ಅವರ ಲುಕ್‌ ಸಾಮಾಜಿಕ ಜಾಲತಾಣದಲ್ಲಿ ಲೀಕ್‌ ಆಗಿದೆ. 70–80ರ ದಶಕದ ನಾಯಕರಂತೆ ಸಣ್ಣ ಮೀಸೆ ಬಿಟ್ಟು ಟೋಪಿ ತೊಟ್ಟಿರುವ ದುಲ್ಕರ್ ಜೆಮಿನಿ ಗಣೇಶ್‌ ಅವರನ್ನೇ ಹೋಲುತ್ತಿದ್ದಾರೆ.

‘ಮಹಾನದಿ’ ಚಿತ್ರವು 70–80ರ ಖ್ಯಾತ ನಟಿ ಸಾವಿತ್ರಿ ಅವರ ಜೀವನದ ಕುರಿತಾಗಿದ್ದು. ಸಾವಿತ್ರಿ ಅವರ ಪಾತ್ರವನ್ನು ಕೀರ್ತಿ ಸುರೇಶ್ ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ಸಮಂತಾ ಅವರೂ ಕೂಡ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ದುಲ್ಕರ್‌ ಅವರ ಪಾತ್ರ ಹೆಚ್ಚು ಕಾಲ ತೆರೆಯಮೇಲೆ ಇರದಿದ್ದರು ಅತ್ಯಂತ ಮಹತ್ವದ್ದು ಎನ್ನಲಾಗುತ್ತಿದೆ.

‘ಮಹಾನದಿ’ ಚಿತ್ರ ಏಕಕಾಲಕ್ಕೆ ತೆಲುಗು ಹಾಗೂ ತಮಿಳು ಭಾಷೆಯಲ್ಲಿ ತಯಾರಾಗುತ್ತಿದ್ದು ದುಲ್ಕರ್‌ ಸಲ್ಮಾನ್‌ಗೆ ಇದು ಎರಡನೇ ತಮಿಳು ಹಾಗೂ ಮೊದಲನೇ ತೆಲುಗು ಚಿತ್ರವಾಗಲಿದೆ. ಈಗಾಗಲೇ ‘ಓಕೆ ಕಣ್ಮನಿ’ ತಮಿಳು ಚಿತ್ರದಲ್ಲಿ ನಟಿಸಿ ತಮಿಳು ಪ್ರೇಕ್ಷಕರಿಗೆ ಹತ್ತಿರವಾಗಿರುವ ದುಲ್ಕರ್‌ ತಮ್ಮ ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ ಎನ್ನುತ್ತಿದ್ದಾರೆ ದಕ್ಷಿಣ ಭಾರತದ ಸಿನಿಪಂಡಿತರು.

ದುಲ್ಕರ್‌ ಅವರ ಮಲಯಾಳಂ ಚಿತ್ರ ‘ಸೋಲೊ’ ಚಿತ್ರೀಕರಣ ಮುಗಿದಿದ್ದು ಕೆಲವೇ ದಿನಗಳಲ್ಲಿ ಮಲಯಾಳಂ ಹಾಗೂ ತಮಿಳು ಎರಡೂ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

ಪ್ರತಿಕ್ರಿಯಿಸಿ (+)