ಶುಕ್ರವಾರ, ಡಿಸೆಂಬರ್ 6, 2019
17 °C

ದೀಪಿಕಾ ಪಡುಕೋಣೆ ‘ರೋಗದ ಕೋಳಿ’ ಅಂತೆ!

Published:
Updated:
ದೀಪಿಕಾ ಪಡುಕೋಣೆ ‘ರೋಗದ ಕೋಳಿ’ ಅಂತೆ!

ವ್ಯಾನಿಟಿ ಫೇರ್‌’ ನಿಯತಕಾಲಿಕೆಗಾಗಿ ಫೋಟೊ ಶೂಟ್‌ ನಡೆಸಿದ್ದ ದೀಪಿಕಾ ಗುರುವಾರ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್ ಮಾಡಿರುವ ಚಿತ್ರದಲ್ಲಿ ತೀರಾ ತೆಳ್ಳಗೆ ಕಾಣುತ್ತಿದ್ದಾರೆ. ‘ದೀಪಿಕಾ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ’ ಎಂದು ಹಲವರು ಈ ಚಿತ್ರಕ್ಕೆ ಪ್ರತಿಕ್ರಿಯಿಸಿದ್ದಾರೆ.

ನಟೀಮಣಿಯರು ತೆಳ್ಳಗಾಗುವುದು ಹೊಸ ವಿಷಯವೇನಲ್ಲ. ಜೀರೋಸೈಜ್ ಎಂಬ ಪರಿಭಾಷೆ ಹುಟ್ಟಿರುವುದೇ ನಟಿಯರಿಗಾಗಿ ಎನ್ನುವಂತಾಗಿದೆ ಸಿನಿಜಗತ್ತು. ಆದರೆ, ಇತ್ತೀಚೆಗೆ ತೀರಾ ತೆಳ್ಳಗೆ ಕಾಣಿಸಿಕೊಂಡಿರುವ ನಟಿ ದೀಪಿಕಾ ಪಡುಕೋಣೆ ನೆಟ್ಟಿಗರಿಂದ ಟ್ರೋಲ್‌ ಆಗಿದ್ದಾರೆ!

‘ವ್ಯಾನಿಟಿ ಫೇರ್‌’ ನಿಯತಕಾಲಿಕೆಗಾಗಿ ಫೋಟೊ ಶೂಟ್‌ ನಡೆಸಿದ್ದ ದೀಪಿಕಾ ಗುರುವಾರ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್ ಮಾಡಿರುವ ಚಿತ್ರದಲ್ಲಿ ತೀರಾ ತೆಳ್ಳಗೆ ಕಾಣುತ್ತಿದ್ದಾರೆ. ‘ದೀಪಿಕಾ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ’ ಎಂದು ಹಲವರು ಈ ಚಿತ್ರಕ್ಕೆ ಕಮೆಂಟ್‌ ಮಾಡಿದ್ದಾರೆ.

‘ಈ ರೋಗದ ಕೋಳಿಯನ್ನು ಯಾರಾದರೂ ಆಸ್ಪತ್ರೆಗೆ ಸೇರಿಸಿ. ‘ಚೀಪಿಕಾ’ಗೆ ಒಳ್ಳೆಯ ಚಿಕಿತ್ಸೆ ಬೇಕಿದೆ’ ಎಂದು ಒಬ್ಬರು ಕಾಲೆಳೆದಿದ್ದರೆ, ‘ನೀವಿನ್ನೂ ರಣಬೀರ್‌ ಕಪೂರ್‌ ಅವರಿಂದ ದೂರವಾದ ಖಿನ್ನತೆಯಲ್ಲೇ ಇರುವಂತಿದೆ. ಅದರಿಂದ ಹೊರಬಂದು ಏನನ್ನಾದರೂ ತಿನ್ನಿ’ ಎಂದು ಮತ್ತೊಬ್ಬರು ಕಮೆಂಟಿಸಿದ್ದಾರೆ.

ದೀಪಿಕಾ ಚಿತ್ರದ ಬಗ್ಗೆ ಕೆಲವು ಕಮೆಂಟ್‌ಗಳು ಹೀಗಿವೆ ನೋಡಿ..

‘ನೀವು ತಿನ್ನುವುದನ್ನು ಮರೆತಂತಿದೆ. ಹೋಗಿ ತಿನ್ನಿ' ‘ಇದು ಅಪೌಷ್ಟಿಕತೆ’ ‘ಪೌಷ್ಟಿಕತೆಯ ಕೊರತೆ ಇರುವಂತೆ ಕಾಣುತ್ತಿದ್ದೀರಿ'

‘ಏನನ್ನಾದರೂ ತಿನ್ನಮ್ಮಾ...’

‘ಸ್ವಲ್ಪವಾದರೂ ಆರೋಗ್ಯವಾಗಿರು ದೀಪಿಕಾ’

ಪ್ರತಿಕ್ರಿಯಿಸಿ (+)