ಶನಿವಾರ, ಡಿಸೆಂಬರ್ 7, 2019
16 °C

ಭಾರತ ಥ್ರೋಬಾಲ್‌ ಫೆಡರೇಷನ್‌ಗೆ ಪ್ರಹ್ಲಾದ್‌ ಜೋಷಿ ಅಧ್ಯಕ್ಷ

Published:
Updated:
ಭಾರತ ಥ್ರೋಬಾಲ್‌ ಫೆಡರೇಷನ್‌ಗೆ ಪ್ರಹ್ಲಾದ್‌ ಜೋಷಿ ಅಧ್ಯಕ್ಷ

ಬೆಂಗಳೂರು: ಬಿಜೆಪಿ ಸಂಸದ ಪ್ರಹ್ಲಾದ್‌ ಜೋಷಿ ಅವರು ಭಾರತ ಥ್ರೋಬಾಲ್‌ ಫೆಡರೇಷನ್‌ನ (ಟಿ.ಎಫ್‌.ಐ) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ನಡೆದ ಟಿ.ಎಫ್‌.ಐ ವಾರ್ಷಿಕ ಮಹಾಸಭೆಯಲ್ಲಿ ಜೋಷಿ ಅವರನ್ನು ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಜೋಷಿ ಅವರು 2017ರಿಂದ 2020ರ ವರೆಗೆ ಅಧಿಕಾರದಲ್ಲಿರುತ್ತಾರೆ.

ಟಿ.ಎಫ್‌.ಐ ನೂತನ ಆಡಳಿತ ಮಂಡಳಿ: ಪ್ರಹ್ಲಾದ್‌ ಜೋಷಿ (ಅಧ್ಯಕ್ಷ), ಟಿ.ಎಸ್‌. ಪ್ರಭುಕುಮಾರ್‌, ರವೀಂದ್ರ ಸೊನ್ನಾವಣಿ, ಆರ್‌.ಕೆ. ಸಹಾನಿ ಮತ್ತು ಎನ್‌.ಕೆ. ಮೀನಾಕ್ಷಿ (ಎಲ್ಲರೂ ಉಪಾ ಧ್ಯಕ್ಷರು), ಟಿ.ರಾಮಣ್ಣ (ಮಹಾ ಕಾರ್ಯ ದರ್ಶಿ), ಪಿ. ರಾಮು, ಎಸ್‌. ಮಣಿ ಮತ್ತು ಸುದರ್ಶನ್‌ಕುಮಾರ್‌ ಆನಂದ್‌ (ಎಲ್ಲ ರೂ ಜಂಟಿ ಕಾರ್ಯದರ್ಶಿ), ಎನ್‌.ಎಸ್‌. ವೇಣುಗೋಪಾಲ್‌ (ಖಜಾಂಚಿ).

ಕಾರ್ಯಕಾರಿ ಮಂಡಳಿ ಸದಸ್ಯರು: ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ಪುದುಚೇರಿ ಮತ್ತು ಪಶ್ಚಿಮ ಬಂಗಾಳ.

 

ಪ್ರತಿಕ್ರಿಯಿಸಿ (+)