ಭಾನುವಾರ, ಡಿಸೆಂಬರ್ 15, 2019
23 °C

ಫುಟ್‌ಬಾಲ್‌: ಸುಡಾನ್ ಮೇಲಿನ ನಿಷೇಧ ತೆರವು

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಫುಟ್‌ಬಾಲ್‌: ಸುಡಾನ್ ಮೇಲಿನ ನಿಷೇಧ ತೆರವು

ಜೊಹಾನ್ಸ್‌ಬರ್ಗ್‌: ಆಡಳಿತದಲ್ಲಿ ಸರ್ಕಾರದ ಮಧ್ಯ ಪ್ರವೇಶವನ್ನು ವಿರೋಧಿಸಿ ಸುಡಾನ್‌ ಫುಟ್‌ಬಾಲ್ ತಂಡದ ಮೇಲೆ ಹೇರಿದ್ದ ನಿಷೇಧವನ್ನು ಅಂತರ ರಾಷ್ಟ್ರೀಯ ಫುಟ್‌ಬಾಲ್‌ ಫೆಡರೇಷನ್‌ ತೆರವುಗೊಳಿಸಿದೆ.

ಮುತಾಸಿಮ್‌ ಗಫಾರ್ ಸರ್‌ ಎಲ್ಖಾಟಿಮ್ ಅವರನ್ನು ರಾಷ್ಟ್ರೀಯ ಫುಟ್‌ಬಾಲ್‌ ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ ಒತ್ತಾಯಪೂರ್ವಕವಾಗಿ ಕೆಳಗಿಳಿಸಿದ ನಂತರ ತಂಡದ ಮೇಲೆ ಕಳೆದ ವಾರ ನಿಷೇಧ ಹೇರಲಾಗಿತ್ತು.

ಈಗ ಅವರಿಗೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಅನುವು ಮಾಡಿಕೊಡಲಾಗಿದ್ದು ಈ ಕಾರಣ ದಿಂದ ನಿಷೇಧ ತೆರವು ಗೊಳಿಸಲಾಗಿದೆ. ಫುಟ್‌ಬಾಲ್‌ ಸಂಸ್ಥೆಯೊಳಗೇ ಇರ ದಿದ್ದ ಅಬ್ದೆಲ್ ರೆಹಮಾನ್ ಎಲ್ಖಾ ಟಿಮ್ ಅವರನ್ನು ಅಧ್ಯಕ್ಷರನ್ನಾಗಿ ಮಾಡುವುದಕ್ಕಾಗಿ ಪೊಲೀಸರ ನೆರವಿನಿಂದ ಮುತಾಸಿಮ್‌ ಗಫಾರ್ ಅವರನ್ನು ಕೆಳಗಿಳಿಸಲಾಗಿತ್ತು. ಇತ್ತೀ ಚಿನ ವರ್ಷಗಳಲ್ಲಿ ಗಮನಾರ್ಹ ಸಾಧನೆ ಮಾಡಲು ಸಾಧ್ಯವಾಗದ ಸುಡಾನ್ ತಂಡ ಆಫ್ರಿಕಾ ದೇಶಗಳ ಕ್ರಮಾಂಕ ಪಟ್ಟಿಯಲ್ಲಿ 49ನೇ ಸ್ಥಾನದಲ್ಲಿದೆ.

ಪ್ರತಿಕ್ರಿಯಿಸಿ (+)