ಸೋಮವಾರ, ಡಿಸೆಂಬರ್ 9, 2019
26 °C

ಫುಟ್ಸಾಲ್‌ ಜೊತೆ ರೊನಾಲ್ಡಿನೊ ಒಪ್ಪಂದ

Published:
Updated:
ಫುಟ್ಸಾಲ್‌ ಜೊತೆ ರೊನಾಲ್ಡಿನೊ ಒಪ್ಪಂದ

ಮುಂಬೈ: ಬ್ರೆಜಿಲ್‌ನ ಫುಟ್‌ಬಾಲ್ ದಂತಕಥೆ ರೊನಾಲ್ಡಿನೊ ಅವರೊಂದಿಗೆ ಪ್ರೀಮಿಯರ್‌ ಫುಟ್ಸಾಲ್‌ ಲೀಗ್‌ ಸಂಘಟಕರು ಮೂರು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದಾರೆ.

ಲೀಗ್‌ಗೆ ಸಂಬಂಧಿಸಿದ ಕಾರ್ಯ ಚಟುವಟಿಕೆಯ ಭಾಗವಾಗಿ ಶುಕ್ರವಾರ ಇಲ್ಲಿಗೆ ಬಂದ ಅವರು ಮಾಧ್ಯಮ ಪ್ರತಿ ನಿಧಿಗಳ ಜೊತೆ ಮಾತನಾಡಿ ‘ಈ ವರ್ಷ ಪ್ರೀಮಿಯರ್‌ ಫುಟ್ಸಾಲ್‌ ಭಾರಿ ಯಶಸ್ಸು ಕಾಣಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.

‘ಮೊದಲ ವರ್ಷ ಲೀಗ್ ಯಶಸ್ವಿಯಾಗಿ ನಡೆದಿತ್ತು. ಅನೇಕರಲ್ಲಿ ಹುಮ್ಮಸ್ಸು ತುಂಬಲು ಕಾರಣವಾಗಿತ್ತು. ಇಂಥ ಲೀಗ್‌ ಜೊತೆಯಲ್ಲಿ ಗುರುತಿಸಿಕೊಳ್ಳಲು ನನಗೆ ಅತೀವ ಸಂತಸವಾಗುತ್ತಿದೆ’ ಎಂದು ಅವರು ಹೇಳಿದರು.

‘ಮೊದಲ ವರ್ಷದ ಯಶಸ್ಸಿನ ಬೆನ್ನಲ್ಲೇ ಫಿಫಾ ರ‍್ಯಾಂಕಿಂಗ್‌ನಲ್ಲಿ ಭಾರತ 96ನೇ ಸ್ಥಾನಕ್ಕೇರಿದೆ. ಇದು ಇಲ್ಲಿ ಫುಟ್‌ಬಾಲ್‌ ಬೆಳೆಯಲು ಇನ್ನಷ್ಟು ಸಹಕಾರಿಯಾಗಲಿದೆ’ ಎಂದು ಅವರು ನುಡಿದರು. ಫುಟ್ಸಾಲ್‌ ಲೀಗ್‌ನ ಎರ ಡನೇ ಆವೃತ್ತಿಯ ಪಂದ್ಯಗಳು ಸೆಪ್ಟೆಂಬರ್‌ 15ರಂದು ಇಲ್ಲಿ ಆರಂಭವಾಗಲಿವೆ. ದೆಹಲಿ ಮತ್ತು ಬೆಂಗಳೂರಿನಲ್ಲೂ ಪಂದ್ಯಗಳು ನಡೆಯಲಿವೆ.

ಪ್ರತಿಕ್ರಿಯಿಸಿ (+)