ಶನಿವಾರ, ಡಿಸೆಂಬರ್ 7, 2019
25 °C

ಸ್ಕ್ವಾಷ್‌: ಸೆಮಿಫೈನಲ್‌ಗೆ ಸಂಧು

Published:
Updated:
ಸ್ಕ್ವಾಷ್‌: ಸೆಮಿಫೈನಲ್‌ಗೆ ಸಂಧು

ಚೆನ್ನೈ: ಭಾರತದ ಹರಿಂದರ್ ಪಾಲ್‌ ಸಂಧು ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ವಿಕ್ಟೋರಿಯನ್ ಓಪನ್ ಸ್ಕ್ವಾಷ್ ಟೂರ್ನಿಯಲ್ಲಿ ಶುಕ್ರವಾರ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ 11–4, 11–8, 11–5ರಲ್ಲಿ ಆಸ್ಟ್ರೇಲಿಯಾದ ರ್‍ಯಾಸ್ ಡೊಲ್ಲಿಂಗ್‌ ಅವರನ್ನು ಮಣಿಸಿದರು.

ದಕ್ಷಿಣ ಆಸ್ಟ್ರೇಲಿಯಾ ಓಪನ್‌ನಲ್ಲಿ ಡೊವ್ಲಿಂಗ್‌ ಎದುರು ಸೋಲು ಕಂಡಿದ್ದ ಭಾರತದ ಆಟಗಾರ ಇಲ್ಲಿ ಅಮೋಘ ಆಟದ ಮೂಲಕ ಗೆಲುವು ಒಲಿಸಿಕೊಂಡರು.

ಸೆಮಿಫೈನಲ್‌ ಪಂದ್ಯದಲ್ಲಿ ಶನಿವಾರ ಎರಡನೇ ಶ್ರೇಯಾಂಕದ ಆಟಗಾರ ನೆದರ್ಲೆಂಡ್ಸ್‌ನ ಪೆಡ್ರೊ ಸಚ್‌ವೀರತ್‌ಮನ್‌ ವಿರುದ್ಧ ಆಡಲಿದ್ದಾರೆ.

ಪ್ರತಿಕ್ರಿಯಿಸಿ (+)