ಶುಕ್ರವಾರ, ಡಿಸೆಂಬರ್ 6, 2019
18 °C

‘ಐಎಸ್‌ ವಿರುದ್ಧ ಯುದ್ಧ ಮುಗಿದಿಲ್ಲ’

ಪಿಟಿಐ Updated:

ಅಕ್ಷರ ಗಾತ್ರ : | |

‘ಐಎಸ್‌ ವಿರುದ್ಧ ಯುದ್ಧ ಮುಗಿದಿಲ್ಲ’

ವಾಷಿಂಗ್ಟನ್‌: ಮೋಸುಲ್‌ ನಗರವನ್ನು ಸಂಪೂರ್ಣವಾಗಿ ಮತ್ತೆ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೂ ಐಎಸ್‌ ಉಗ್ರ ಸಂಘಟನೆಯ ವಿರುದ್ಧ ನಡೆಯುತ್ತಿರುವ ಯುದ್ಧ ಸಂಪೂರ್ಣವಾಗಿ ಇನ್ನೂ ಮುಗಿದಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.

‘ಐಎಸ್‌ ವಿರುದ್ಧದ ಕಾರ್ಯಾಚರಣೆ ಮುಂದುವರಿಯಲಿದೆ. ಹೀಗಾಗಿಯೇ ಮುಂದಿನ ಹಂತದ ಕಾರ್ಯಾಚರಣೆಯ ರೂಪುರೇಷೆ ಕುರಿತು ಚರ್ಚಿಸಲು ಶುಕ್ರವಾರ ಮಿತ್ರಪಡೆಗಳ ಸಭೆ ನಡೆಸಲಾಯಿತು’ ಎಂದು ಐಎಸ್‌ ಸಂಘಟನೆ ವಿರುದ್ಧ ಮಿತ್ರಪಡೆಗಳ ಅಮೆರಿಕದ ವಿಶೇಷ ರಾಯಭಾರಿ ಬ್ರೆಟ್‌ ಮ್ಯಾಕ್‌ಗರ್ಕ್‌ ತಿಳಿಸಿದ್ದಾರೆ.

‘ಮೋಸುಲ್‌ ನಗರವನ್ನು ಐಎಸ್‌ ಹಿಡಿತದಿಂದ ಮುಕ್ತಗೊಳಿಸಿರುವುದು ಅತ್ಯಂತ ಮಹತ್ವದ್ದಾಗಿತ್ತು. ಎರಡನೇ ವಿಶ್ವ ಯುದ್ಧದ ಬಳಿಕ ಅತ್ಯಂತ ಕಠಿಣ ಸೇನಾ ಕಾರ್ಯಾಚರಣೆ ಇದಾಗಿತ್ತು’ ಎಂದು ವಿಶ್ಲೇಷಿಸಿದ್ದಾರೆ.

‘ಇರಾಕ್‌ಗಿಂತ ಸಿರಿಯಾದಲ್ಲಿನ ಕಾರ್ಯಾಚರಣೆ ಜಟಿಲವಾಗಿದೆ. ಮಿತ್ರ ಪಡೆಗಳ ಸಹಭಾಗಿತ್ವದಲ್ಲಿ ಇರಾಕ್‌ನಂತೆಯೇ ಸಿರಿಯಾದಲ್ಲೂ ವ್ಯವಸ್ಥಿತವಾಗಿ ಕಾರ್ಯಚರಣೆ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

‘ಕಳೆದ ನಾಲ್ಕು ವರ್ಷಗಳಲ್ಲಿ ವಿವಿಧ ದೇಶಗಳಿಂದ 40 ಸಾವಿರ  ಯುವಕರು ಸಿರಿಯಾಗೆ ಬಂದಿದ್ದು, ಐಎಸ್‌ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದಾಗಿಯೇ ಐಎಸ್‌ ಪ್ರಬಲ ಸಂಘಟನೆಯಾಗಿ ಬೆಳೆಯಿತು. ಈ ಯುವಕರು ಭಯೋತ್ಪಾದಕರು, ಆತ್ಮಹತ್ಯಾ ಬಾಂಬರ್‌ಗಳಾಗಿದ್ದಾರೆ. ಹೀಗಾಗಿಯೇ ಇರಾಕ್‌ನಲ್ಲಿ ಆತ್ಮಾಹುತಿ ದಾಳಿಗಳು ಹೆಚ್ಚಿವೆ. ಕಳೆದ ವರ್ಷ 100 ಆತ್ಮಾಹುತಿ ದಾಳಿ ನಡೆದಿವೆ’ ಎಂದು ವಿವರಿಸಿದ್ದಾರೆ.

ಪ್ರತಿಕ್ರಿಯಿಸಿ (+)